Asia Cup 2023: ಏಷ್ಯಾ ಕಪ್ ಉದಯವಾಗಿದ್ದು ಯಾವಾಗ, ಎಲ್ಲಿ; ಹೆಚ್ಚು ರನ್, ವಿಕೆಟ್ ಪಡೆದವರು ಯಾರು
By Prasanna Kumar P N Jul 21, 2023
Hindustan Times Kannada
ಪ್ರಸಕ್ತ ಆವೃತ್ತಿಯ ಏಷ್ಯಾ ಕಪ್ ಟೂರ್ನಿಗೆ ವೇಳಾಪಟ್ಟಿ ಪ್ರಕಟಗೊಂಡಿದೆ. ಆಗಸ್ಟ್ 30 ರಿಂದ ಶುರುವಾಗಲಿರುವ ಈ ಟೂರ್ನಿಯು ಸೆಪ್ಟೆಂಬರ್ 17ಕ್ಕೆ ಮುಕ್ತಾಯಗೊಳ್ಳಲಿದೆ.
1984 ರಿಂದ ಆರಂಭವಾದ ಟೂರ್ನಿ ಆರಂಭವಾಗಿದೆ. ಒಟ್ಟು 15 ಆವೃತ್ತಿಗಳು ಪೂರ್ಣಗೊಂಡಿವೆ. ಮೊದಲ ಆವೃತ್ತಿಯು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆದಿತ್ತು. ಚೊಚ್ಚಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್ ಆಗಿತ್ತು.
ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಈ ಟೂರ್ನಿ ನಡೆಯುತ್ತದೆ. ಟೂರ್ನಿ ಆರಂಭವಾಗಿದ್ದೇ ಏಕದಿನ ಕ್ರಿಕೆಟ್ ಮಾದರಿಯಿಂದ. 2016ರಿಂದ ಟಿ20 ಮಾದರಿಯಲ್ಲೂ ಟೂರ್ನಿ ಆರಂಭವಾಯಿತು.
ಒಟ್ಟು ಒಟ್ಟು 15 ಆವೃತ್ತಿಗಳಲ್ಲಿ ಟೀಮ್ ಇಂಡಿಯಾ, 7 ಬಾರಿ ಪ್ರಶಸ್ತಿ ಗೆದ್ದಿದೆ. ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡ ಎನಿಸಿದೆ. ಉಳಿದಂತೆ ಶ್ರೀಲಂಕಾ 6 ಬಾರಿ, ಪಾಕಿಸ್ತಾನ 2 ಬಾರಿ ಗೆಲುವು ಸಾಧಿಸಿದೆ.
ಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ಗಳಿಸಿದ ಪಟ್ಟಿಯಲ್ಲಿ ಸನತ್ ಜಯಸೂರ್ಯ ಅಗ್ರಸ್ಥಾನದಲ್ಲಿದ್ದಾರೆ. 25 ಪಂದ್ಯಗಳಲ್ಲಿ 1220 ರನ್ ಗಳಿಸಿದ್ದಾರೆ. ಭಾರತದ ಪರ ಸಚಿನ್ ತೆಂಡೂಲ್ಕರ್ (971) ಮೊದಲ ಸ್ಥಾನದಲ್ಲಿದ್ದಾರೆ.
ಏಷ್ಯಾ ಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನದಲ್ಲಿದ್ದಾರೆ. 24 ಪಂದ್ಯಗಳಲ್ಲಿ 30 ವಿಕೆಟ್ ಉರುಳಿಸಿದ್ದಾರೆ.