ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕನೆಂಬ ಅಗ್ಗಳಿಕೆ ಎಂಎಸ್‌ ಧೋನಿ ಅವರದ್ದು

By Jayaraj
Mar 21, 2024

Hindustan Times
Kannada

ಸಿಎಸ್‌ಕೆ ತಂಡವನ್ನು ಬರೋಬ್ಬರಿ 212 ಪಂದ್ಯಗಳಲ್ಲಿ ಧೋನಿ ಮುನ್ನಡೆಸಿದ್ದರು.

ಐಪಿಎಲ್‌ನಲ್ಲಿ ತಂಡವೊಂದನ್ನು ಅತಿ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ದಾಖಲೆ ಮಾಹಿ ಹೆಸರಲ್ಲಿದೆ.

ಸಿಎಸ್‌ಕೆ ತಂಡವನ್ನು 128 ಪಂದ್ಯಗಳಲ್ಲಿ ಗೆಲುವಿನತ್ತ ಕೊಂಡೊಯ್ದಿದ್ದಾರೆ.

2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದಲೂ ಸೂಪರ್ ಕಿಂಗ್ಸ್ ತಂಡಕ್ಕೆ ಮಾಹಿ ನಾಯಕರಾಗಿದ್ದಾರೆ.

2 ವರ್ಷ ಫ್ರಾಂಚೈಸಿ ಅಮಾನತುಗೊಂಡಾಗ, ಬೇರೆ ತಂಡದ ನಾಯಕನಾಗಿದ್ದರು.

ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡ ಐದು ಬಾರಿ ಐಪಿಎಲ್‌ ಟ್ರೋಫಿ ಗೆದ್ದಿದೆ.

ಹೆಚ್ಚು ಐಪಿಎಲ್‌ ಟ್ರೋಫಿ ಗೆದ್ದ ನಾಯಕರಲ್ಲಿ ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್‌ ಶರ್ಮಾರೊಂದಿಗೆ ಧೋನಿ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ.

ತಂಡವನ್ನು ಒಟ್ಟು 10 ಬಾರಿ ಫೈನಲ್‌ನತ್ತ ಮಾಹಿ ಮುನ್ನಡೆಸಿದ್ದಾರೆ. ಇದರಲ್ಲಿ 5 ಬಾರಿ ರನ್ನರ್‌ ಅಪ್‌ ಆಗಿದೆ.

ಸಿಎಸ್‌ಕೆ ಪರ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ.

ಬೇಸಿಗೆಯಲ್ಲಿ ಹೊಟ್ಟೆಯ ಕಾಳಜಿ ಹೀಗೆ ಮಾಡಿ