ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಇಂದು 43ನೇ (ಜುಲೈ 7, 1981) ಜನ್ಮದಿನದ ಸಂಭ್ರಮ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಐಸಿಸಿ ಟ್ರೋಫಿ ಗೆದ್ದಿರುವ ವಿಶ್ವದ ಏಕೈಕ ಕ್ಯಾಪ್ಟನ್ ಎಂಬ ಹೆಗ್ಗಳಿಕೆ ಧೋನಿ ಅವರದ್ದು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2020 ಆಗಸ್ಟ್ 15ರಂದು ನಿವೃತ್ತಿ ಘೋಷಿಸಿದರು. 2019ರ ಜೂನ್ 9ರಂದು ಕೊನೆಯ ಪಂದ್ಯ ಆಡಿದ್ದರು.
ಸದ್ಯ ಐಪಿಎಲ್ ಟೂರ್ನಿಯಲ್ಲಿ ಸಕ್ರಿಯವಾಗಿದ್ದಾರೆ. 42 ವರ್ಷದ ಧೋನಿ 16ನೇ ಆವೃತ್ತಿಯಲ್ಲಿ ಚೆನ್ನೈಗೆ 5ನೇ ಟ್ರೋಫಿ ಗೆದ್ದುಕೊಟ್ಟರು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯಾಗಿದ್ದರೂ ಧೋನಿ ಜನಪ್ರಿಯತೆ ಮಾತ್ರ ಕುಗ್ಗುತ್ತಿಲ್ಲ. ಅವರ ಬ್ರ್ಯಾಂಡ್ ವ್ಯಾಲ್ಯೂ ಕೂಡ ಹೆಚ್ಚಾಗ್ತಿದೆ.
2023ರಲ್ಲಿ ಧೋನಿಯ ಒಟ್ಟಾರೆ ನಿವ್ವಳ ಮೌಲ್ಯವು ಪ್ರಸ್ತುತ 127 ಮಿಲಿಯನ್ ಡಾಲರ್ ಅಂದರೆ, 1040 ಕೋಟಿ.
ಧೋನಿ ಬಳಿ ಕಿಯಾ ಇವಿ6, ಫೆರಾರಿ 599 ಜಿಟಿಒ, ಮಿತ್ಸುಬಿಷಿ ಪಜೆರೋ ಸ್ಪೋರ್ಟ್ಸ್, ಗ್ರ್ಯಾಂಡ್ ಚೆರೋಕೀ ಟ್ರ್ಯಾಕ್‌ಹಾಕ್ ಜೀಪ್, ನಿಸ್ಸಾನ್ ಜೊಂಗಾ, ಮರ್ಸಿಡಿಸ್-ಬೆನ್ಜ್ ಜಿಎಲ್ ಸೇರಿದಂತೆ ಹಲವು.
ಹಾರ್ಲೆ-ಡೇವಿಡ್ಸನ್, ಕವಾಸಕಿ ನಿಂಜಾ, ಕಾನ್ಫೆಡರೇಟ್ ಹೆಲ್ಕ್ಯಾಟ್ X132, ಸುಜುಕಿ ಹಯಾಬುಸಾ, ಡುಕಾಟಿ 1098, ಯಮಹಾ ಥಂಡರ್‌ಕ್ಯಾಟ್, ಸುಜುಕಿ ಶೋಗನ್ ಸೇರಿದಂತೆ ಹಲವು ಬೈಕ್ಗಳಿವೆ.
ರಾಂಚಿಯಲ್ಲಿ ಧೋನಿಯ ಭವ್ಯವಾದ 7 ಎಕರೆ ತೋಟವಿದೆ. 2021ರಲ್ಲಿ ಪುಣೆಯ ಪಿಂಪ್ರಿ-ಚಿಂಚ್ವಾಡ್ ಪ್ರದೇಶದಲ್ಲಿ ಮನೆ ಖರೀದಿಸಿರುವ ಮಾಹಿತಿ ಇದೆ.
ಧೋನಿ ಪ್ರೊಡಕ್ಷನ್ ಹೌಸ್ 'ಧೋನಿ ಎಂಟರ್ಟೈನ್ಮೆಂಟ್ ಲಿಮಿಟೆಡ್'ನಲ್ಲಿ ತಮಿಳಿನಲ್ಲಿ ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾ ನಿರ್ಮಿಸಿದ್ದು ಬಿಡುಗಡೆಗೆ ಸಿದ್ಧವಾಗಿದೆ.