ಬಲಿಷ್ಠ ಪಾಕಿಸ್ತಾನ ಸೋಲಿಸಿ ದಾಖಲೆ ಬರೆದ ಯುಎಸ್​ಎ

By Prasanna Kumar P N
Jun 07, 2024

Hindustan Times
Kannada

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ಎರಡನೇ ಗೆಲುವು ದಾಖಲಿಸಿದೆ. ಬಲಿಷ್ಠ ಪಾಕಿಸ್ತಾನ ತಂಡವನ್ನೇ ಸೋಲಿಸಿ ವಿಶ್ವದಾಖಲೆ ನಿರ್ಮಿಸಿದೆ.

ಡಲ್ಲಾಸ್​​ನಲ್ಲಿ ನಡೆದ ಗುಂಪು ಹಂತದ 11ನೇ ಪಂದ್ಯದಲ್ಲಿ ನಡೆದ ಸೂಪರ್​ ಓವರ್​​ನಲ್ಲಿ ಪಾಕಿಸ್ತಾನ ತಂಡವನ್ನೇ ಮಣಿಸಿದ ಅಮೆರಿಕ ವಿಶೇಷ ದಾಖಲೆಯಲು ಸಾಧ್ಯವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 20 ಓವರ್​​​ಗಳಲ್ಲಿ 159 ರನ್ ಗಳಿಸಿತು. ಅಮೆರಿಕ ಸಹ ಅಷ್ಟೇ ಓವರ್​ಗಳಲ್ಲಿ ಅಷ್ಟೇ ರನ್ ಗಳಿಸ್ತು.

ಹೀಗಾಗಿ, ಸೂಪರ್ ಓವರ್​ ಮೊರೆ ಹೋಗಬೇಕಾಯಿತು. ಆಗ ಮೊದಲು ಬ್ಯಾಟ್ ಮಾಡಿದ ಯುಎಸ್​​ಎ 18 ರನ್ ಗಳಿಸಿತು. ಆದರೆ ಪಾಕ್ ಕೇವಲ 13 ರನ್ ಗಳಿಸಿ ಮುಖಭಂಗಕ್ಕೆ ಒಳಗಾಯಿತು.

ಈ ಗೆಲುವಿನೊಂದಿಗೆ ಯುನೈಟೆಡ್ ಸ್ಟೇಟ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೆಸ್ಟ್​ ಆಡುವ 2ನೇ ತಂಡವನ್ನು ಸೋಲಿಸಿ ದಾಖಲೆ ನಿರ್ಮಿಸಿದೆ.

ಪಾಕಿಸ್ತಾನಕ್ಕೂ ಮೊದಲು ಅಂದರೆ ವಿಶ್ವಕಪ್​ಗೂ ಮುಂಚೆ ನಡೆದ ಟಿ20ಐ ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಅಮೆರಿಕ ಸೋಲಿಸಿತ್ತು.

ವಿದ್ವಾನ್‌ ಮಹಾದೇವಪ್ಪ ಅವರ ಪುತ್ರರಾದ ಮೈಸೂರು ನಾಗರಾಜ್‌ ಹಾಗೂ ಮೈಸೂರು ಮಂಜುನಾಥ್‌