ಹೀಗಾದರೆ ಮಾತ್ರ ಪಾಕಿಸ್ತಾನ ಸೂಪರ್-8 ಪ್ರವೇಶಿಸುತ್ತೆ?
By Prasanna Kumar P N
Jun 13, 2024
Hindustan Times
Kannada
ಟಿ20 ವಿಶ್ವಕಪ್ 2024 ಲೀಗ್ ಕೊನೆಯ ಹಂತಕ್ಕೆ ಬಂದಿದೆ. ಸೂಪರ್-8 ಪ್ರವೇಶಿಸಲು ತಂಡಗಳು ಸರ್ಕಸ್ ಮಾಡುತ್ತಿವೆ. ಈ ಪೈಕಿ ಪಾಕಿಸ್ತಾನ ತಂಡ ಒಂದು.
ಪಾಕಿಸ್ತಾನ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಸೋತು, 1 ಗೆಲುವು ದಾಖಲಿಸಿದೆ. ಉಳಿದೊಂದು ಪಂದ್ಯದಲ್ಲಿ ಗೆಲ್ಲಬೇಕಿದೆ.
ಪ್ರಸ್ತುತ ಪಾಕ್ ಸೂಪರ್-8 ಪ್ರವೇಶಿಸಬೇಕೆಂದರೆ ಯುಎಸ್ಎ ತಂಡದ ಫಲಿತಾಂಶ ಮುಖ್ಯವಾಗುತ್ತದೆ. ಏಕೆಂದರೆ ಅಮೆರಿಕ 2 ಗೆದ್ದು ಬೀಗಿದೆ.
ಎ ಗುಂಪಿನಲ್ಲಿ ಭಾರತ ಅಗ್ರಸ್ಥಾನದೊಂದಿಗೆ ಸೂಪರ್-8 ಪ್ರವೇಶಿಸಿದೆ. ಯುಎಸ್ಎ (4 ಅಂಕ) 2ನೇ ಸ್ಥಾನ, ಪಾಕ್ (2 ಅಂಕ) 3ನೇ ಸ್ಥಾನದಲ್ಲಿದೆ.
ಪಾಕ್ 2ನೇ ಸ್ಥಾನ ಪಡೆಯಲು ಐರ್ಲೆಂಡ್ ವಿರುದ್ಧ ಯುಎಸ್ಎ ಸೋಲಬೇಕು. ಅಲ್ಲದೆ, ತನ್ನ ಕೊನೆ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆಲ್ಲಬೇಕು.
ಪಾಕ್ ಗೆದ್ದು, ಅಮೆರಿಕ ಸೋತರೆ ಬಾಬರ್ ಪಡೆ ಯಾವುದೇ ನೆಟ್ ರನ್ ರೇಟ್ ಅವಶ್ಯಕತೆ ಇಲ್ಲದೆ ಸೂಪರ್-8 ಪ್ರವೇಶಿಸಲಿದೆ.
ಒಂದು ಯುಎಸ್ಎ ಪಂದ್ಯ ಮಳೆಯಿಂದ ರದ್ದಾದರೂ ಪಾಕ್ ಹೊರ ಬೀಳಲಿದೆ. ಏಕೆಂದರೆ ಅಮೆರಿಕ ಅಂಕ 5 ಆಗಲಿದ್ದು, ಪಾಕ್ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ 4 ಅಂಕ ಮಾತ್ರ ಆಗಲಿದೆ.
ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ
Instagram/rashmika_mandanna
ಮುಂದಿನ ಸ್ಟೋರಿ ಕ್ಲಿಕ್ ಮಾಡಿ