ಶೋಯೆಬ್ ಮಲಿಕ್ ಪತ್ನಿ ಬಗ್ಗೆ ಈ ವಿಷಯಗಳನ್ನು ತಿಳಿಯಿರಿ!

By Prasanna Kumar P N
Jun 19, 2024

Hindustan Times
Kannada

ಪಾಕಿಸ್ತಾನಿ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚೆಗೆ 3ನೇ ಮದುವೆಯಾದರು. ಪತ್ನಿಯ ಹೆಸರು ಸನಾ ಜಾವೇದ್.

ಸನಾ ಜಾವೇದ್ ಕುರಿತು ಕೆಲವು ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಸನಾ ಜಾವೇದ್ ಪಾಕಿಸ್ತಾನದ ಪ್ರಸಿದ್ಧ ನಟಿ. ಸನಾ ಅನೇಕ ಹಿಟ್ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಸನಾ ಜಾವೇದ್ 2012ರಲ್ಲಿ 'ಶೆಹರ್-ಎ-ಜಾತ್' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.

ಇದರ ನಂತರ ಸನಾ ಕಾಲಾ ದೋರಿಯಾ, ಏ ಮುಷ್ತ್-ಎ-ಖಾಕ್, ರೋಮಿಯೋ ವೆಡ್ಸ್ ಹೀರ್ ಮತ್ತು ರುಸ್ವೈ ಧಾರಾವಾಹಿಗಳಲ್ಲಿ ಕೆಲಸ ಮಾಡಿದರು.

ಸನಾಗೆ ಹೆಚ್ಚು ಮನ್ನಣೆ ಸಿಕ್ಕಿದ್ದು, ರೊಮ್ಯಾಂಟಿಕ್ ಧಾರಾವಾಹಿ 'ಖಾನಿ'ಯಿಂದ. ಈ ಪೈಕಿ ಸನಮ್ ಖಾನ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಸನಾ ಜಾವೇದ್ ಕೂಡ ಶೋಯೆಬ್ ಜೊತೆ ಮದುವೆಗೂ ಮುನ್ನ ವಿಚ್ಛೇದನ ಪಡೆದಿದ್ದರು. ಸನಾ ಅವರ ಮೊದಲ ಪತಿ ಪಾಕಿಸ್ತಾನದ ಖ್ಯಾತ ಗಾಯಕ ಉಮೈರ್ ಜಸ್ವಾಲ್.

ಸನಾ ಅವರ ಮೊದಲ ಮದುವೆ 2020ರಲ್ಲಿ ನಡೆಯಿತು. ಭಿನ್ನಾಭಿಪ್ರಾಯಗಳ ಕಾರಣ ಈ ಮದುವೆಯು 28 ನವೆಂಬರ್ 2023ರಂದು ಮುರಿದು ಬಿತ್ತು.

ಸನಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರನ್ನು 8 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಫಾಲೋ ಮಾಡುತ್ತಿದ್ದಾರೆ.

  ಬಿದಿರು ಎಲ್ಲಕ್ಕೂ ಸಲ್ಲುವ  ಹಸಿರು ಅದಿರು