ಭಾರತದ ಮುಂದಿನ ಕೋಚ್ ಹೀಗಿರಬೇಕು, ಬಿಸಿಸಿಐ ನಿರೀಕ್ಷೆಗಳೇನು?

By Jayaraj
May 17, 2024

Hindustan Times
Kannada

ಭಾರತ ಪುರುಷರ ಕ್ರಿಕೆಟ್‌ ತಂಡದ ಮುಂದಿನ ಮುಖ್ಯ ಕೋಚ್‌ ಆಗುವವರಲ್ಲಿ ಬಿಸಿಸಿಐ ಈ 5 ಗುಣಗಳನ್ನು ನಿರೀಕ್ಷಿಸುತ್ತಿದೆ.

ಭಾರತ ಪುರುಷರ ಕ್ರಿಕೆಟ್‌ ತಂಡದಲ್ಲಿ ಶಿಸ್ತಿನ ನಿಯಮ ಪಾಲನೆಯನ್ನು ಪರಿಶೀಲಿಸಲು ಮತ್ತು ಜಾರಿಗೊಳಿಸಲು ಮುಖ್ಯ ತರಬೇತುದಾರರು  ಜವಾಬ್ದಾರರಾಗಿರುತ್ತಾರೆ.

ಪ್ರಮುಖ ಆಟಗಾರರನ್ನು ನಿಭಾಯಿಸುವ ಸಂಬಂಧ ಬಿಸಿಸಿಐ ನಿರೀಕ್ಷೆಗಳನ್ನು ಪೂರೈಸಲು ಸಿದ್ಧರಿರಬೇಕು. ಒತ್ತಡ ನಿಭಾಯಿಸಬೇಕು. 

ಭಾರತ ಕ್ರಿಕೆಟ್‌ನ ಯಶಸ್ಸಿಗಾಗಿ ಸ್ಪಷ್ಟ ಮತ್ತು ಮಹತ್ವಾಕಾಂಕ್ಷೆಯ ಯೋಜನೆಗಳೊಂದಿಗೆ ನೈಪುಣ್ಯತೆ ಹೊಂದಿರಬೇಕು.

ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಗೆಲ್ಲುವ ಸಂಸ್ಕೃತಿ ಮೈಗೂಡಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಡಬೇಕು. ವಿಶ್ವದ ಪ್ರಮುಖ ತಂಡವಾಗಿ ರೂಪಿಸಬಹುದು ಎಂಬುದನ್ನು ಸಾಬೀತುಪಡಿಸಬೇಕು.

ಮುಖ್ಯ ತರಬೇತುದಾರರು ಸ್ಪರ್ಧಾತ್ಮಕ, ನುರಿತ ಮತ್ತು ಸ್ವಾವಲಂಬಿ ಭಾರತೀಯ ತಂಡವನ್ನು ನಿರ್ವಹಿಸುವುದರ ಮೇಲೆ ಗಮನಹರಿಸಬೇಕು. ವೃತ್ತಿಪರ ಮಾನದಂಡಗಳಿಗೆ ಅನುಗುಣವಾಗಿ ಗೌರವಯುತ ವಾತಾವರಣ ಸೃಷ್ಟಿಸಬೇಕು.

ಭಾರತ ತಂಡದ ಅಭಿವೃದ್ಧಿಗಾಗಿ ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಾವಧಿಯ ಯೋಜನೆಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಕೋಚ್ ಮೇಲಿದೆ.

ಚರ್ಮದ ಸುಕ್ಕು, ನೆರಿಗೆ ನಿವಾರಿಸಿ ಅಂದ ಹೆಚ್ಚಿಸುವ ಹೋಮ್‌ಮೇಡ್‌ ಸೀರಮ್‌