ಬಾಂಗ್ಲಾದೇಶ ವಿರುದ್ಧ ಆರ್ ಅಶ್ವಿನ್ ಮುರಿಯಬಲ್ಲ ದಾಖಲೆಗಳಿವು

By Jayaraj
Sep 17, 2024

Hindustan Times
Kannada

ಸೆಪ್ಟೆಂಬರ್‌ 19ರ ಗುರುವಾರದಿಂದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್‌ ಸರಣಿ ಆರಂಭವಾಗುತ್ತಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ನಡೆಯಲಿದೆ.

ಈ ಟೆಸ್ಟ್ ಸರಣಿಯಲ್ಲಿ ಭಾರತದ ಅನುಭವಿ ಬೌಲರ್ ಆರ್ ಅಶ್ವಿನ್ ಮುರಿಯಬಹುದಾದ ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ.

ಡಬ್ಲ್ಯುಟಿಸಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಲು ಅಶ್ವಿನ್‌ಗೆ 14 ವಿಕೆಟ್‌ಗಳ ಅಗತ್ಯವಿದೆ. ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ 187 ವಿಕೆಟ್‌ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಸದ್ಯ ಅಶ್ವಿನ್ 174 ಟೆಸ್ಟ್ ವಿಕೆಟ್‌ ಪಡೆದಿದ್ದಾರೆ.

WTCಯ 2023-2025ರ ಚಕ್ರದಲ್ಲಿ ಅಶ್ವಿನ್ ಈವರೆಗೆ 42 ವಿಕೆಟ್‌ ಪಡೆದಿದ್ದಾರೆ. ಈ ಡಬ್ಲ್ಯುಟಿಸಿ ಅಭಿಯಾನದಲ್ಲಿ ಹೆಚ್ಚು ವಿಕೆಟ್ ಟೇಕರ್ ಆಗಲು ಆಸ್ಟ್ರೇಲಿಯಾದ ಬೌಲರ್ ಜೋಶ್ ಹೇಜಲ್‌ವುಡ್ ಅವರಿಂದ 10 ವಿಕೆಟ್‌ ಹಿಂದಿದ್ದಾರೆ.

ಲಿಯಾನ್‌ ಅವರ 10 ಬಾರಿಯ ಐದು ವಿಕೆಟ್‌ ಗೊಂಚಲುಗಳ ದಾಖಲೆ ಮುರಿಯಲು ಅಶ್ವಿನ್‌ಗೆ ಒಂದು 5 ವಿಕೆಟ್‌ ಗೊಂಚಲು ಬೇಕಿದೆ. 

ಭಾರತ ನೆಲದಲ್ಲಿ ಆಡಿದ ಪಂದ್ಯಗಳಲ್ಲಿ 476 ಅಂತಾರಾಷ್ಟ್ರೀಯ ವಿಕೆಟ್‌ ಪಡೆದ ಅನಿಲ್ ಕುಂಬ್ಳೆ ಅವರ ದಾಖಲೆ ಮುರಿಯಲು ಅಶ್ವಿನ್‌ಗೆ ಕೇವಲ 22 ವಿಕೆಟ್‌ ಅಗತ್ಯವಿದೆ.

ಅಶ್ವಿನ್ ಬಾಂಗ್ಲಾದೇಶ ವಿರುದ್ಧ ಆಡಿದ 6 ಟೆಸ್ಟ್ ಪಂದ್ಯಗಳಲ್ಲಿ 23 ವಿಕೆಟ್‌ ಪಡೆದ್ದಾರೆ. 

ಜಹೀರ್ ಖಾನ್ ಅವರ ದಾಖಲೆ ಮುರಿದು ಬಾಂಗ್ಲಾದೇಶ ವಿರುದ್ಧ ಅತಿ ಹೆಚ್ಚು ಟೆಸ್ಟ್‌ ವಿಕೆಟ್ ಪಡೆದ ಭಾರತೀಯನಾಗಲು ಅಶ್ವಿನ್‌ಗೆ 9 ವಿಕೆಟ್‌ ಮಾತ್ರ ಬೇಕಿದೆ. ಜಹೀರ್ 31 ವಿಕೆಟ್‌ ಪಡೆದಿದ್ದಾರೆ.

ಹೊಸ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ ಕೃಷ್ಣ ಸುಂದರಿ ಭೂಮಿ ಶೆಟ್ಟಿ