ಯೂಟ್ಯೂಬ್ ಆದಾಯ ದಾನ ಮಾಡುತ್ತೇನೆ; ರಿಷಭ್ ಪಂತ್

AFP

By Prasanna Kumar P N
Jun 17, 2024

Hindustan Times
Kannada

ಟಿ20 ವಿಶ್ವಕಪ್​​​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಿಷಭ್ ಪಂತ್, ಇತ್ತೀಚೆಗೆ ಯೂಟ್ಯೂಬ್​ ಚಾನೆಲ್ ಆರಂಭಿಸಿದ್ದು ಗೊತ್ತೇ ಇದೆ.

ಈಗಾಗಲೇ ಪಂತ್ ಅವರ ಯೂಟ್ಯೂಬ್ ಚಾನೆಲ್​ ಅನ್ನು 1 ಲಕ್ಷ ಮಂದಿ ಸಬ್​ಸ್ಕ್ರೈಬ್ ಮಾಡಿಕೊಂಡಿದ್ದಾರೆ.

AFP

ಈ ಸಂತಸದ ಸುದ್ದಿಯನ್ನು ಪಂತ್ ಹಂಚಿಕೊಂಡಿದ್ದರು. ಯೂಟ್ಯೂಬ್ ಕಡೆಯಿಂದ ಸಿಲ್ವರ್ ಪ್ಲೇ ಬಟನ್ ಸಿಕ್ಕಿದೆ.

ಭಾರತ ತಂಡವು ವಿಶ್ವಕಪ್​ನ ಸೂಪರ್​​-8ರಲ್ಲಿ ಅಫ್ಘಾನಿಸ್ತಾನ (ಜೂನ್ 20), ಬಾಂಗ್ಲಾದೇಶ (ಜೂನ್ 22) ಮತ್ತು ಆಸ್ಟ್ರೇಲಿಯಾ ತಂಡಗಳನ್ನು (ಜೂನ್ 24) ಎದುರಿಸಲಿದೆ.

AFP

ಐಪಿಎಲ್ ಅವಧಿಯಲ್ಲಿ ಯುಟ್ಯೂಬ್ ಚಾನೆಲ್ ಪ್ರಾರಂಭಿಸಿದ ಪಂತ್, ತಿಂಗಳೊಳಗೆ 1 ಲಕ್ಷ 20 ಸಾವಿರ ಚಂದಾದಾರರು ಆಗಿದ್ದಾರೆ. 

AFP

ಇದೇ ಖುಷಿಯಲ್ಲಿ ಮಾತನಾಡಿರುವ ಪಂತ್, ಯೂಟ್ಯೂಬ್​ ಚಾನೆಲ್​ನಿಂದ ಬರುವ ಎಲ್ಲಾ ಹಣವನ್ನು ಉದಾತ್ತ ಕಾರ್ಯಕ್ಕೆ ಬಳಸುವೆ ಎಂದು ಹೇಳಿದ್ದಾರೆ.

ಎಲ್ಲಾ ಹಣವನ್ನು ದಾನ ಧರ್ಮಗಳಿಗೆ ವಿನಿಯೋಗಿಸುತ್ತೇನೆ ಎನ್ನುವ ಮೂಲಕ ರಿಷಭ್ ಪಂತ್ ಇದೀಗ ಎಲ್ಲರ ಮನಗೆದ್ದಿದ್ದಾರೆ.

ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವರಿವರು