ಟಿ20 ವಿಶ್ವಕಪ್​​ನಲ್ಲಿ ರೋಹಿತ್​ ಶರ್ಮಾ ವಿಶ್ವದಾಖಲೆ

By Prasanna Kumar P N
Jun 28, 2024

Hindustan Times
Kannada

ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ವಿಶ್ವದಾಖಲೆಯೊಂದನ್ನು ಬರೆದಿದ್ದಾರೆ.

ಶ್ರೀಲಂಕಾ ಮಾಜಿ ನಾಯಕ ಮಹೇಲಾ ಜಯವರ್ಧನೆ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿ ಅಗ್ರಸ್ಥಾನಕ್ಕೇರಿದ್ದಾರೆ.

ಇಂಗ್ಲೆಂಡ್ ವಿರುದ್ಧದ 2ನೇ ಸೆಮಿಫೈನಲ್​​ನಲ್ಲಿ ರೋಹಿತ್​ 4 ಬೌಂಡರಿ ಸಿಡಿಸಿದ ವೇಳೆ ಟಿ20 ವಿಶ್ವಕಪ್​ನಲ್ಲಿ​ ಅಧಿಕ ಬೌಂಡರಿ ಚಚ್ಚಿದ ಆಟಗಾರ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ. 

ಇದಕ್ಕೂ ಮುನ್ನ ಈ ದಾಖಲೆ ಜಯವರ್ಧನೆ ಹೆಸರಿನಲ್ಲಿತ್ತು. ಅವರು  111 ಬೌಂಡರಿ ಬಾರಿಸಿದ್ದರು. ಇದೀಗ ರೋಹಿತ್​ ಈ ಬೌಂಡರಿಗಳ ದಾಖಲೆ ಹಿಂದಿಕ್ಕಿದ್ದಾರೆ.

ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ರೋಹಿತ್​ ಬೌಂಡರಿಗಳ ಸಂಖ್ಯೆ 91 ಇತ್ತು. ಪ್ರಸ್ತುತ ಅವರ ಬೌಂಡರಿಗಳ ಸಂಖ್ಯೆ 113 ಆಗಿದೆ.

ವಿರಾಟ್ ಕೊಹ್ಲಿ (105), ಡೇವಿಡ್ ವಾರ್ನರ್​ (101), ತಿಲಕರತ್ನೆ ದಿಲ್ಶನ್ (101) ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ.

ಸಮೋಸಾದಿಂದ ಚಿಕನ್‌ ವಿಂಗ್ಸ್‌ವರೆಗೆ; ವೀಕೆಂಡ್‌ ಪಾರ್ಟಿಗೆ ಹೇಳಿ ಮಾಡಿಸಿದ ಸ್ನ್ಯಾಕ್ಸ್‌ಗಳು