ಪಾಕಿಸ್ತಾನಕ್ಕೆ ದೊಡ್ಡ ಆಘಾತ, ಪ್ರಮುಖ ಸ್ಪಿನ್ನರ್​ಗೆ ಗಾಯ

By Prasanna Kumar P N
Jun 05, 2024

Hindustan Times
Kannada

ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಆರಂಭಿಕ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನ ತಂಡವು ಆಘಾತಕ್ಕೆ ಒಳಗಾಗಿದೆ.

ತಂಡದ ಪ್ರಮುಖ ಸ್ಪಿನ್ನರ್​ ಇಮಾದ್ ವಾಸೀಂ ಇಂಜುರಿಗೆ ತುತ್ತಾಗಿದ್ದು, ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ಜೂನ್ 6 ರಂದು ಡಲ್ಲಾಸ್‌ನ ಗ್ರ್ಯಾಂಡ್‌ ಪ್ರೈರೀ ಮೈದಾನದಲ್ಲಿ ನಡೆಯುವ ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ ಅವರು ಆಡುವುದಿಲ್ಲ.

ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಜೂನ್ 5ರ ಬುಧವಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇಂಗ್ಲೆಂಡ್‌ ವಿರುದ್ಧದ 4ನೇ ಪಂದ್ಯಕ್ಕೆ ಬ್ಯಾಟಿಂಗ್ ಪ್ರಾಕ್ಟೀಸ್​ ವೇಳೆ ಇಮಾದ್, ಬಲ ಪಕ್ಕೆಲುಬಿನಲ್ಲಿ ನೋವು ಕಾಣಿಸಿಕೊಂಡಿತ್ತು. 

ಹೀಗಾಗಿ ಮೇ 30ರಂದು ಅವರು ಇಂಗ್ಲೆಂಡ್ ಎದುರು ಕಣಕ್ಕಿಳಿದಿರಲಿಲ್ಲ. ಇದೀಗ ಅಮೆರಿಕ ಪಂದ್ಯದ ನಂತರ ಜೂನ್‌ 9ರಂದು ಭಾರತದ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.

ನೀವು ವೀಕ್ಷಿಸಲೇಬೇಕಾದ ಭಾರತದ 8 ಸೈಂಟಿಫಿಕ್ ಫಿಕ್ಷನ್‌ ಚಿತ್ರಗಳು