ಟಿ20ಐ ರ‍್ಯಾಂಕಿಂಗ್​ನಲ್ಲಿ ಸೂರ್ಯನ ದರ್ಬಾರ್ ಅಂತ್ಯ

By Prasanna Kumar P N
Jun 27, 2024

Hindustan Times
Kannada

ಟಿ20 ವಿಶ್ವಕಪ್ ಸೆಮಿಫೈನಲ್​ಗಳಿಗೂ ಮುನ್ನ ಐಸಿಸಿ ನೂತನ ಟಿ20ಐ ಬ್ಯಾಟರ್​​ಗಳ ಶ್ರೇಯಾಂಕ ಬಿಡುಗಡೆ ಮಾಡಿದೆ.

ವಿಶೇಷ ಏನೆಂದರೆ ನಂಬರ್ 1 ಸ್ಥಾನದಲ್ಲಿದ್ದ ಸೂರ್ಯಕುಮಾರ್ ಯಾದವ್ ಈಗ ಒಂದು ಸ್ಥಾನ ಕುಸಿತ ಕಂಡಿದ್ದಾರೆ.

ಸೂರ್ಯ ಸ್ಥಾನ ಕಿತ್ತುಕೊಂಡ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಟಿ20ಐನಲ್ಲಿ ನಂಬರ್ 1 ಬ್ಯಾಟರ್ ಆಗಿದ್ದಾರೆ.

ಸೂರ್ಯಕುಮಾರ್ ಜೊತೆಗೆ ಇಂಗ್ಲೆಂಡ್‌ನ ಫಿಲ್ ಸಾಲ್ಟ್, ಪಾಕಿಸ್ತಾನದ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಕೂಡ ಕುಸಿದಿದ್ದಾರೆ.

4 ಸ್ಥಾನ ಮೇಲೇರಿದ ಟ್ರಾವಿಸ್ ಹೆಡ್ 844 ರೇಟಿಂಗ್ ಅಂಕಗಳೊಂದಿಗೆ ಸೂರ್ಯ​ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. 

ಸೂರ್ಯ ಸದ್ಯ 842 ರೇಟಿಂಗ್ ಪಾಯಿಂಟ್ ಹೊಂದಿದ್ದು, ಸೆಮಿಫೈನಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಹೆಡ್​ರನ್ನು ಹಿಂದಿಕ್ಕಬಹುದು.

ಫಿಲ್ ಸಾಲ್ಟ್ (816 ರೇಟಿಂಗ್), ಬಾಬರ್ (755 ರೇಟಿಂಗ್‌) ಕ್ರಮವಾಗಿ 3 ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಯುದ್ಧದಿಂದ ನಡೆದಿರಲಿಲ್ಲ ಆ ಐದು ಒಲಿಂಪಿಕ್ಸ್​ಗಳು!