ಕ್ವಿಂಟನ್ ಡಿ ಕಾಕ್ ಪತ್ನಿ ಚಿಯರ್ ಲೀಡರ್ ಆಗಿದ್ರು!

By Prasanna Kumar P N
Jul 01, 2024

Hindustan Times
Kannada

ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರು ಮದುವೆಯಾಗಿದ್ದು, ಮುದ್ದಾದ ಮಗಳನ್ನೂ ಹೊಂದಿದ್ದಾರೆ.

ಡಿ ಕಾಕ್ ಪತ್ನಿಯ ಹೆಸರು ಸಾಶಾ ಹಾರ್ಲೆ. ಅವರು ವೃತ್ತಿಯಲ್ಲಿ ಒಂದು ಕಾಲದಲ್ಲಿ ಚಿಯರ್ ಲೀಡರ್​ ಆಗಿ ಸೇವೆ ಸಲ್ಲಿಸಿದ್ದರು.

ಡಿ ಕಾಕ್ ಅವರು 2012ರಲ್ಲಿ ಚಾಂಪಿಯನ್ಸ್ ಲೀಗ್ ಸಮಯದಲ್ಲಿ ಸಾಶಾ ಅವರನ್ನು ಮೊದಲ ಬಾರಿಗೆ ನೋಡಿದ್ದರು. ಮೊದಲ ನೋಟದಲ್ಲೇ ಸಾಶಾ ಅವರ ಪ್ರೀತಿಯ ಬಲೆಗೆ ಬಿದ್ದಿದ್ದರು.

ಈ ಪಂದ್ಯದಲ್ಲಿ ಡಿ ಕಾಕ್ ಮುಂಬೈ ಇಂಡಿಯನ್ಸ್ ವಿರುದ್ಧ ಲಯನ್ಸ್ ಪರ ಆಡುತ್ತಿದ್ದರು. ಈ ಪಂದ್ಯದಲ್ಲಿ ಸಾಶಾ ಚಿಯರ್ ಲೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಮಾಧ್ಯಮ ವರದಿಗಳ ಪ್ರಕಾರ, ಕ್ರಿಕೆಟಿಗ ಮತ್ತು ಸಾಶಾ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತರಾಗಿ, ಕೆಲ ದಿನಗಳ ಕಾಲ ಅಲ್ಲಿಯೇ ಪರಿಚಯ ಮುಂದುವರೆಸಿದರು.

ಸಾಮಾಜಿಕ ಜಾಲತಾಣಗಳ ಪರಿಚಯ ನಂತರ ಪರಸ್ಪರ ಮುಖಾಮುಖಿ ಭೇಟಿಯಾದರು. ನಾಲ್ಕು ವರ್ಷಗಳ ಡೇಟಿಂಗ್ ನಡೆಸಿದರು. 2016 ರಲ್ಲಿ ಅವರು ವಿವಾಹವಾದರು.

ಐಪಿಎಲ್ ಪಂದ್ಯಗಳ ಸಮಯದಲ್ಲಿ ಸಾಶಾ ಆಗಾಗ್ಗೆ ಕ್ರೀಡಾಂಗಣಕ್ಕೆ ಆಗಮಿಸಿ ಡಿ ಕಾಕ್ ಮತ್ತು ಅವರ ತಂಡಕ್ಕೆ ಹುರಿದುಂಬಿಸುತ್ತಿದ್ದರು.

ಫ್ಯಾಶನ್ ಟ್ರೆಂಡ್‌ಗಳನ್ನು ಅನುಕರಿಸುವ ಸಾಶಾ ಈಗ ಗೃಹಿಣಿಯಾಗಿ ತನ್ನ ಜೀವನವನ್ನು ನಡೆಸುತ್ತಿದ್ದಾರೆ.

ಗರ್ಭಿಣಿಯರು ಸೇವಿಸಲೇಬೇಕಾದ 5 ಹಣ್ಣುಗಳಿವು

Image Credits: Adobe Stock