ನೋಡೋಕೆ ಸಖತ್ ಕಣ್ರಿ ಅಮೀರ್-ಇಮಾದ್ ಪತ್ನೀರು
By Prasanna Kumar P N
Jun 18, 2024
Hindustan Times
Kannada
ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ನೀಡಿದ್ದು, ಸೂಪರ್-8 ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗಿಲ್ಲ.
ನಿವೃತ್ತಿ ಹಿಂಪಡೆದು ತಂಡಕ್ಕೆ ಮರಳಿದ್ದ ಇಮಾದ್ ವಾಸೀಂ ಮತ್ತು ಮೊಹಮ್ಮದ್ ಅಮೀರ್ ಮತ್ತೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಮತ್ತೆ ನಿವೃತ್ತಿಯಾಗಲು ಮುಂದಾಗಿರುವ ಅಮೀರ್-ಇಮಾದ್ ಅವರ ಪತ್ನಿಯರ ಕುರಿತು ಈ ವರದಿಯಲ್ಲಿ ತಿಳಿಯೋಣ.
ಇಮಾದ್ ಪತ್ನಿಯ ಹೆಸರು ಸಾನಿಯಾ ಅಶ್ಫಾಕ್. ಸಾನಿಯಾ ಮತ್ತು ಇಮಾದ್ 2019ರಲ್ಲಿ ವಿವಾಹವಾದರು. ಇಬ್ಬರು ಮಕ್ಕಳಿದ್ದಾರೆ.
ಸಾನಿಯಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇಮಾದ್ ಚಿಯರ್ ಮಾಡಲು ಮೈದಾನದಲ್ಲಿ ಆಗಾಗ್ಗೆ ಕಾಣಿಸಿಕೊಂಡಿದ್ದಾರೆ.
ಮೊಹಮ್ಮದ್ ಅಮೀರ್ ಅವರ ಹೆಂಡತಿಯ ಹೆಸರು ನರ್ಜಿಸ್. ಈ ಜೋಡಿಯು 2016ರಲ್ಲಿ ವಿವಾಹವಾಯಿತು.
ನರ್ಜಿಸ್ ಬಾಲಾ ಅತ್ಯಂತ ಸುಂದರವಾಗಿದ್ದಾರೆ. ನರ್ಜಿಸ್ ಇಬ್ಬರು ಮಕ್ಕಳ ತಾಯಿಯಾಗಿದ್ದರೂ ಫಿಟ್ನೆಸ್ ವಿಷಯದಲ್ಲಿ ಈಗಲೂ ಎಲ್ಲರಿಗೂ ಮಾದರಿ.
ನರ್ಜಿಸ್ 2017ರಲ್ಲಿ ತನ್ನ ಮೊದಲ ಮಗಳಿಗೆ ಮತ್ತು 2020 ರಲ್ಲಿ ತನ್ನ ಎರಡನೇ ಮಗಳಿಗೆ ಜನ್ಮ ನೀಡಿದರು.
‘ಪ್ಲಸ್ ಅಥವಾ ಮೈನಸ್ ಬಜಾರ್ ಅಲ್ಲಿ ಯಾವತ್ತೂ ಇದ್ದೇ ಇರ್ತಿನಿ’ ಎಂದ ರಕ್ಷಕ್ ಬುಲೆಟ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ