ಭಾರತ-ಅಮೆರಿಕ ಪಂದ್ಯ ಮಳೆಯಿಂದ ರದ್ದಾದರೆ, ಪಾಕ್ ಮನೆಗೆ!

By Prasanna Kumar P N
Jun 12, 2024

Hindustan Times
Kannada

ಭಾರತ-ಅಮೆರಿಕ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 

ಇಂದು ನಡೆಯುವ (ಜೂನ್ 12) ಪಂದ್ಯವು ಒಂದು ವೇಳೆ ಮಳೆಯಿಂದ ರದ್ದಾದರೆ ಯಾರಿಗೆ ಲಾಭ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ವಿಶ್ವಕಪ್​ನ 25ನೇ ಪಂದ್ಯದಲ್ಲಿ ಯಾರೇ ಗೆದ್ದರೂ ‘ಎ’ ಗ್ರೂಪ್​ನಿಂದ ಮೊದಲ ತಂಡವಾಗಿ ಸೂಪರ್​-8 ಟಿಕೆಟ್​ ಪಡೆದುಕೊಳ್ಳಲಿದೆ.

ಆದರೆ, ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಮಳೆಯಿಂದ ರದ್ದಾದರೆ ಉಭಯ ತಂಡಗಳು (ಭಾರತ-ಅಮೆರಿಕ) ಸೂಪರ್​-8ಗೆ ಪ್ರವೇಶಿಸಲಿವೆ. 

ಇದರೊಂದಿಗೆ ಪಾಕಿಸ್ತಾನ ಟೂರ್ನಿಯಿಂದ ಅಧಿಕೃತವಾಗಿ ಹೊರ ಬೀಳಲಿದೆ. ಪ್ರಸ್ತುತ ಪಾಕ್ 1 ಗೆಲುವು, 2 ಸೋಲು ಕಂಡಿದೆ.

ಪಂದ್ಯ ರದ್ದಾದರೆ ಭಾರತ-ಅಮೆರಿಕ ಅಂಕ 5 ಆಗಲಿದೆ. ಆದರೆ ಪಾಕ್ ಉಳಿದೊಂದು ಪಂದ್ಯ ಗೆದ್ದರೂ 4 ಅಂಕ ಪಡೆಯಲಷ್ಟೆ ಸಾಧ್ಯ.

ಕಷ್ಟಪಟ್ಟು ಅಲ್ಲ, ಇಷ್ಟಪಟ್ಟು ಓದಿ; ಪರೀಕ್ಷಾ ಸಿದ್ಧತೆಗೆ 6 ಸಲಹೆಗಳು

Pinterest