ಹಾರ್ದಿಕ್‌ ಪಾಂಡ್ಯ-ನತಾಶಾ ಲವ್‌ ಸ್ಟೋರಿ

By Jayaraj
May 28, 2024

Hindustan Times
Kannada

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಕುರಿತು ವದಂತಿಗಳಿವೆ.

ನತಾಶಾ ಮತ್ತು ಹಾರ್ದಿಕ್, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.

ನತಾಶಾ ಮತ್ತು ಹಾರ್ದಿಕ್ ಮೊದಲ ಬಾರಿಗೆ 2018ರಲ್ಲಿ ನೈಟ್‌ಕ್ಲಬ್‌ನಲ್ಲಿ ಭೇಟಿಯಾದರು.

ಮೊದಲ ನೋಟದಲ್ಲೇ ಇಬ್ಬರಲ್ಲೂ ಪ್ರೀತಿ ಚಿಗುರಿತ್ತು. ಆ ನಂತರ ಪರಸ್ಪರ ಭೇಟಿ ಆರಂಭವಾಯಿತು. 

ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.

2020ರ ಜನವರಿಯಲ್ಲಿ ಹಾರ್ದಿಕ್ ಮತ್ತು ನತಾಶಾ ದಿಢೀರ್ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.

ಇವರಿಬ್ಬರೂ 2020ರ ಮೇ 31ರಂದು ಪರಸ್ಪರ ವಿವಾಹವಾದರು. ಅದಾಗಲೇ ನತಾಶಾ ಪ್ರೆಗ್ನೆಂಟ್‌ ಆಗಿದ್ರು.

ಮದುವೆಯಾದ ಎರಡು ತಿಂಗಳೊಳಗೆ, ಅಂದರೆ ಜುಲೈ ತಿಂಗಳಲ್ಲಿ ನತಾಶಾ ಗಂಡು ಮಗುವಿಗೆ ಜನ್ಮ ನೀಡಿದರು.

2023ರಲ್ಲಿ, ಇಬ್ಬರೂ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಅದ್ಧೂರಿ ಆಚರಣೆಯೊಂದಿಗೆ ಮತ್ತೊಮ್ಮೆ ವಿವಾಹವಾದರು.

ತೂಕ ಕಡಿಮೆ ಮಾಡಲು  5 ಸರಳ ಯೋಗಾಸನಗಳು 

Pexel