ಭಾರತದ ಟಾಪ್ ಕ್ರಿಕೆಟಿಗರ ಆರೋಗ್ಯಕರ ಬ್ರೇಕ್‌ಫಾಸ್ಟ್ ಹೀಗಿರುತ್ತೆ

By Jayaraj
Jun 30, 2024

Hindustan Times
Kannada

ಭಾರತ ತಂಡವು 2024ರ ಟಿ20 ವಿಶ್ವಕಪ್ ಗೆದ್ದಿದೆ. ಟೂರ್ನಿಯುದ್ದಕ್ಕೂ ಫಿಟ್‌ ಆಗಿ ಆಡಿದ ಆಟಗಾರರು ಯಶಸ್ಸು ಪಡೆದಿದ್ದಾರೆ. ಹಾಗಿದ್ದರೆ ಟೀಮ್‌ ಇಂಡಿಯಾ ಪ್ಲೇಯರ್‌ಗಳ ಬ್ರೇಕ್‌ಫಾಸ್ಟ್ ಹೇಗಿರುತ್ತೆ ಎಂಬುದನ್ನು ನೋಡೋಣ.

ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಪೋಹಾ ಸೇವಿಸಲು ಇಷ್ಟಪಡುವುದಾಗಿ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.

ಭಾರತದ ಅತ್ಯಂತ ಫಿಟ್‌ ಆಟಗಾರ ವಿರಾಟ್ ಕೊಹ್ಲಿ ಬೆಳಗ್ಗಿನ ಉಪಾಹಾರಕ್ಕೆ ಚೋಲೆ ಭಟೂರೆ (ಪೂರಿ, ಚನ್ನಾ) ಇಷ್ಟಪಡುತ್ತಾರೆ. ಪಂದ್ಯ ದಿನ ಓಟ್ಸ್ ಮತ್ತು ಹಣ್ಣು ಸೇವಿಸುತ್ತಾರೆ.

ಜಸ್ಪ್ರೀತ್ ಬುಮ್ರಾ ಬ್ರೇಕ್‌ಫಾಸ್ಟ್‌ಗೆ ಮೊಟ್ಟೆ ಮತ್ತು ಕಾರ್ಬೋಹೈಡ್ರೇಟ್‌ ಇರುವ ಆಹಾರ ಸೇವಿಸುತ್ತಾರೆ.

ವರದಿಗಳ ಪ್ರಕಾರ, ಸೂರ್ಯಕುಮಾರ್ ಯಾದವ್ ಉಪಾಹಾರಕ್ಕಾಗಿ ಮೊಟ್ಟೆ ಮತ್ತು ಪ್ರೋಟೀನ್ ಸ್ಮೂಥಿ ಸೇವಿಸುತ್ತಾರೆ.

ರಿಷಭ್ ಪಂತ್ ಅವರು ಬೇಸನ್ ಚಿಲ್ಲಾ, ಮೊಟ್ಟೆಗಳೊಂದಿಗೆ ಟೋಸ್ಟ್ ಅಥವಾ ಓಟ್ಸ್‌ ಸೇವಿಸುತ್ತಾರೆ.

ಹಾರ್ದಿಕ್ ಪಾಂಡ್ಯ ಉಪಾಹಾರಕ್ಕೆ ಎಳನೀರು ಜೊತೆಗೆ ತಾಜಾ ಹಣ್ಣುಗಳು ಮತ್ತು ನಟ್ಸ್‌ ಸೇವಿಸುತ್ತಾರೆ.

ರವೀಂದ್ರ ಜಡೇಜಾ ಹಾಲು ಮತ್ತು ಧೋಕ್ಲಾ ಸೇರಿದಂತೆ ಗುಜರಾತಿ ಭಕ್ಷ್ಯ ಇಷ್ಟಪಡುತ್ತಾರೆ.

ಕುಲ್ದೀಪ್‌ ಯಾದವ್‌ ಎಗ್‌ ವೈಟ್‌ ಓಮ್ಲೆಟ್‌ ಇಷ್ಟಪಡುತ್ತಾರೆ.

ದೇಶದಲ್ಲಿ ನೀವು ಖರೀದಿಸಬಹುದಾದ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು