ಆರ್​ಸಿಬಿ ಫ್ಯಾನ್ಸ್​ಗೆ ಮತ್ತೊಮ್ಮೆ ಧನ್ಯವಾದ; ವಿರಾಟ್ ಕೊಹ್ಲಿ ಭಾವುಕ

By Prasanna Kumar P N
May 24, 2024

Hindustan Times
Kannada

ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಸೋತು ಟೂರ್ನಿಯಿಂದ ಹೊರಬಿತ್ತು.

ಆರಂಭಿಕ 8 ಪಂದ್ಯಗಳಲ್ಲಿ 7 ಸೋತಿದ್ದ ಆರ್​​ಸಿಬಿ, ಕೊನೆಯ 6  ಪಂದ್ಯಗಳಲ್ಲಿ ಆರೂ ಗೆದ್ದು ಪ್ಲೇಆಫ್​​ಗೆ ಲಗ್ಗೆ ಇಟ್ಟಿತು.

ತಂಡದ ಸೋಲು-ಗೆಲುವನ್ನು ಲೆಕ್ಕಿಸದೆ ಅಪಾರ ಬೆಂಬಲ ತೋರಿದ ಫ್ಯಾನ್ಸ್​ಗೆ ಧನ್ಯವಾದ ಅರ್ಪಿಸಿರುವ ವಿರಾಟ್ ಕೊಹ್ಲಿ, ಇನ್​ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್​ ​ ಮಾಡಿದ್ದಾರೆ.

ಯಾವಾಗಲೂ ನಮ್ಮನ್ನು ಪ್ರೀತಿಸುವಂತೆ ಮತ್ತು ಪ್ರಶಂಸಿಸುವಂತೆ ಮಾಡಿದ್ದಕ್ಕೆ ಆರ್​ಸಿಬಿ ಎಲ್ಲಾ ಫ್ಯಾನ್ಸ್​ಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಪ್ರಸಕ್ತ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ತಮ್ಮ ತಂಡ ಟೂರ್ನಿಯಿಂದ ಹೊರಬಿದ್ದರೂ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ.

ಐಪಿಎಲ್​ನಲ್ಲಿ ಕೊಹ್ಲಿ ಆಡಿರುವ 15 ಪಂದ್ಯಗಳಲ್ಲಿ 741 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 61.75, ಸ್ಟ್ರೈಕ್​ರೇಟ್ 154.70. ಬೌಂಡರಿ 62, ಸಿಕ್ಸರ್​ 38.

ಐಪಿಎಲ್ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದಾರೆ.

ತೂಕ ಕಡಿಮೆ ಮಾಡಲು  5 ಸರಳ ಯೋಗಾಸನಗಳು 

Pexel