ಆಸ್ಟ್ರೇಲಿಯಾ ಕ್ರಿಕೆಟಿಗ ಟಿಮ್ ಡೇವಿಡ್ ಬಲಿಷ್ಠ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಅವರು ಪ್ರಸ್ತುತ ಐಪಿಎಲ್ನ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ.
ಟಿಮ್ ಡೇವಿಡ್ ಪತ್ನಿಯೂ ಒಬ್ಬ ಕ್ರೀಡಾಪಟು. ಕ್ರೀಡಾಕೂಟದ ವೇಳೆಯೇ ಈ ಇಬ್ಬರು ಭೇಟಿಯಾಗಿದ್ದರು. ಅಲ್ಲಿಂದ ಅವರಿಬ್ಬರ ಪ್ರೇಮಕಥೆ ಆರಂಭವಾಯಿತು.
ಟಿಮ್ ಡೇವಿಡ್ ಪತ್ನಿಯ ಹೆಸರು ಸ್ಟೆಫಾನಿ ಕೆರ್ಶಾ. ಅವರು ಆಸ್ಟ್ರೇಲಿಯಾ ಪರ ಹಾಕಿ ಆಡುತ್ತಾರೆ. ಫಾರ್ವರ್ಡ್ ಆಟಗಾರ್ತಿಯಾಗಿರುವ ಅವರು ಗೋಲುಗಳನ್ನು ಗಳಿಸುವಲ್ಲಿ ನಿಪುಣರು.
ಡೇವಿಡ್ ಮತ್ತು ಕೆರ್ಶಾ ತಮ್ಮ ಮದುವೆಗೂ ಮುನ್ನ ಹಲವು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಕೊನೆಗೆ ಆಸ್ಟ್ರೇಲಿಯಾದ ಪರ್ತ್ ನಗರದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು.
ಕ್ರೀಡೆಯಲ್ಲಿ ತುಂಬಾ ಒಲವು ಹೊಂದಿರುವ ಇಬ್ಬರು, ಆಯಾ ಕ್ರೀಡೆಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುತ್ತಾರೆ. ಟೌನ್ಸ್ವಿಲ್ಲೆಯಲ್ಲಿ ಜನಿಸಿದ ಕೆರ್ಶಾ ಜೆರ್ಸಿ ಸಂಖ್ಯೆ 14. ಇಲ್ಲಿಯವರೆಗೆ ಆಸ್ಟ್ರೇಲಿಯಾ ತಂಡಕ್ಕೆ 89 ಹಾಕಿ ಪಂದ್ಯಗಳನ್ನು ಆಡಿದ್ದಾರೆ.
ಕೆರ್ಶಾ ಆಸ್ಟ್ರೇಲಿಯಾ ತಂಡದೊಂದಿಗೆ ವಿಶ್ವಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ. ಹಾಗೆಯೇ ಮಹಿಳಾ ಹಾಕಿ ಚಾಂಪಿಯನ್ಶಿಪ್ನಲ್ಲೂ ಬೆಳ್ಳಿ ಪದಕ ಗೆದ್ದಿದ್ದಾರೆ.
ಡೇವಿಡ್ ಪ್ರಸ್ತುತ ಐಪಿಎಲ್ನಲ್ಲಿ ತಮ್ಮ ಬ್ಯಾಟಿಂಗ್ನಲ್ಲಿ ವಿಧ್ವಂಸಕರಾಗಿದ್ದಾರೆ. ಉದ್ದದ ಸಿಕ್ಸರ್ಗಳನ್ನು ಬಾರಿಸುವುದರಲ್ಲಿ ಅವರು ನಿಪುಣರಾಗಿದ್ದಾರೆ. ಪಂದ್ಯದ ಚಿತ್ರಣವನ್ನೇ ಬದಲಿಸುವ ತಾಕತ್ತು ಅವರಿಗಿದೆ.