Virat Kohli: ಎರಡು ವಿಶ್ವದಾಖಲೆ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ

By Prasanna Kumar P N
Aug 01, 2024

Hindustan Times
Kannada

ಟಿ20 ವಿಶ್ವಕಪ್ 2024 ಬಳಿಕ ವಿರಾಟ್ ಕೊಹ್ಲಿ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ಆಗಸ್ಟ್ 2ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. 

ವಿಶೇಷ ಎಂದರೆ ಈ ಸರಣಿಯಲ್ಲಿ 2 ವಿಶ್ವ ದಾಖಲೆಗಳನ್ನು ಬರೆಯುವ ಅವಕಾಶ ಕಿಂಗ್ ಕೊಹ್ಲಿ ಮುಂದಿದೆ.

ಈ ಸರಣಿಯಲ್ಲಿ 152 ರನ್​ ಗಳಿಸಿದರೆ ಒಡಿಐನಲ್ಲಿ ವೇಗವಾಗಿ 14,000 ರನ್ ಪೂರೈಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಆ ಮೂಲಕ ಸಚಿನ್ ದಾಖಲೆ ಹಿಂದಿಕ್ಕಲಿದ್ದಾರೆ.

ಸಚಿನ್ 350 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಆದರೆ ಈ ದಾಖಲೆ ಬ್ರೇಕ್ ಮಾಡಲು ಕೊಹ್ಲಿಗೆ ಇನ್ನೂ 57 ಪಂದ್ಯಗಳ ಅವಕಾಶ ಇದೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 27 ಸಾವಿರ ರನ್ ಪೂರೈಸಿದ ಬ್ಯಾಟರ್​ಗಳ ಪಟ್ಟಿಗೆ ಸೇರಲು ಕೊಹ್ಲಿಗೆ 116 ರನ್ ಬೇಕು.

ಶ್ರೀಲಂಕಾ ವಿರುದ್ಧ 116 ರನ್ ಕಲೆಹಾಕಿದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 27 ಸಾವಿರ ರನ್ ಪೂರೈಸಿದ 4ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಬೀಟ್ರೂಟ್‌ನ 5 ಅದ್ಭುತ ಆರೋಗ್ಯ ಪ್ರಯೋಜನಗಳು

UNSPLASH, WEB MD