ವಿರಾಟ್ ಕೊಹ್ಲಿ ದಾಖಲೆ; ಈ ಸಾಧನೆಗೈದ ಏಕೈಕ ಕ್ರಿಕೆಟಿಗ

By Prasanna Kumar P N
May 12, 2024

Hindustan Times
Kannada

ಆರ್​​ಸಿಬಿ ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಮತ್ತೊಂದು ವಿಶೇಷ ದಾಖಲೆ ಬರೆದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಐಪಿಎಲ್​​ನಲ್ಲಿ 250 ಪಂದ್ಯಗಳ ಕ್ಲಬ್ ಸೇರಿದ್ದಾರೆ. ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎನಿಸಿದ್ದಾರೆ.

ಕೊಹ್ಲಿಗೂ ಮೊದಲು ಎಂಎಸ್ ಧೋನಿ (263), ರೋಹಿತ್​ ಶರ್ಮಾ (256), ದಿನೇಶ್ ಕಾರ್ತಿಕ್ (256) ಪಂದ್ಯಗಳನ್ನಾಡಿದ್ದಾರೆ.

ಆದರೆ, ಒಂದೇ ಫ್ರಾಂಚೈಸಿ ಪರ 250 ಐಪಿಎಲ್ ಪಂದ್ಯಗಳನ್ನು ಆಡಿದ ಮೊದಲ ಮತ್ತು ಏಕೈಕ ಆಟಗಾರ ಕೊಹ್ಲಿ.

ತನ್ನ 250ನೇ ಪಂದ್ಯದಲ್ಲಿ 13 ಎಸೆತಗಳಲ್ಲಿ 3 ಸಿಕ್ಸರ್​, 1 ಬೌಂಡರಿ ಸಹಿತ 27 ರನ್ ಸಿಡಿಸಿ ಇಶಾಂತ್ ಶರ್ಮಾ ಬೌಲಿಂಗ್​ನಲ್ಲಿ ಔಟಾದರು.

ಪಿಕೆಎಲ್​ 12 ತಂಡಗಳ ಮಾಲೀಕರು ಯಾರು?