ಟಿ20 ವಿಶ್ವಕಪ್ ಇತಿಹಾಸದಲ್ಲೇ ಕೊಹ್ಲಿ ಮೊದಲ ಬಾರಿಗೆ ಡಕೌಟ್

By Prasanna Kumar P N
Jun 13, 2024

Hindustan Times
Kannada

ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ​ ಟೂರ್ನಿಯಲ್ಲಿ ಮೊದಲ ಬಾರಿಗೆ ಗೋಲ್ಡನ್​ ಡಕ್ ಆಗಿದ್ದಾರೆ.

ಟೂರ್ನಿ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಹೊಂದಿರುವ ಕೊಹ್ಲಿ, ಈ ಬಾರಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ.

ಪ್ರಸ್ತುತ ಟೂರ್ನಿಯಲ್ಲಿ ಕೊಹ್ಲಿ ಆಡಿರುವ 3 ಪಂದ್ಯಗಳಿಂದ ಗಳಿಸಿರುವ ಸ್ಕೋರ್ ಕೇವಲ 5 ರನ್.

ಸೌರಭ್ ನೇತ್ರಾವಲ್ಕರ್ ಬೌಲಿಂಗ್​ನಲ್ಲಿ ಕೊಹ್ಲಿ ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿ ಹೊರ ನಡೆದರು.

ಒಟ್ಟಾರೆ ಟಿ20 ಕ್ರಿಕೆಟ್​ನಲ್ಲಿ ಎರಡನೇ ಬಾರಿಗೆ ಗೋಲ್ಡನ್ ಡಕ್​ಗೆ ವಿರಾಟ್ ಔಟಾಗಿದ್ದಾರೆ.

ಇದೇ ವರ್ಷದ ಆರಂಭದಲ್ಲಿ ಅಫ್ಘಾನಿಸ್ತಾನ ವಿರುದ್ಧ ಮೊದಲ ಬಾರಿಗೆ ಟಿ20 ಕ್ರಿಕೆಟ್​ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು.

ಯುದ್ಧದಿಂದ ನಡೆದಿರಲಿಲ್ಲ ಆ ಐದು ಒಲಿಂಪಿಕ್ಸ್​ಗಳು!