ವಿರಾಟ್ ಕೊಹ್ಲಿಗೆ 2023ರ ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ

By Jayaraj
Jun 02, 2024

Hindustan Times
Kannada

ಭಾರತದ ಸ್ಟಾರ್‌ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಂದು ಐಸಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಐಸಿಸಿ ವರ್ಷದ ಏಕದಿನ ಆಟಗಾರ 2023 ಪ್ರಶಸ್ತಿ ವಿರಾಟ್‌ ಕೊಹ್ಲಿ ಬತ್ತಳಿಕೆಗೆ ಸೇರಿದೆ.

ಐಸಿಸಿ ಈ ಕುರಿತು ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ಅಧಿಕೃತ ಮಾಹಿತಿ ನೀಡಿದೆ. 

2023ರಲ್ಲಿ ವಿರಾಟ್‌ ಅಮೋಘ ಪ್ರದರ್ಶನ ನೀಡಿದರು. ಆಡಿದ 27 ಪಂದ್ಯಗಳಲ್ಲಿ ಬರೋಬ್ಬರಿ 1,377 ರನ್ ಗಳಿಸಿದರು.

ಆರು ಶತಕ ಮತ್ತು ಎಂಟು ಅರ್ಧಶತಕಗಳೊಂದಿಗೆ 72.47ರ ಸರಾಸರಿ ಹಾಗೂ 99.13ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದರು.

ಭಾರತದ ಏಷ್ಯಾಕಪ್ 2023ರ ಗೆಲುವಿನಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 122 ರನ್ ಗಳಿಸಿದರು.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನ 11 ಪಂದ್ಯಗಳಲ್ಲಿ ಆಡಿದ ವಿರಾಟ್, 95.62ರ ಸರಾಸರಿಯಲ್ಲಿ 765 ರನ್‌ಗಳನ್ನು ಸಿಡಿಸಿದರು.

ಮೂರು ಸ್ಫೋಟಕ ಶತಕ ಹಾಗೂ ಆರು ಅರ್ಧ ಶತಕಗಳೊಂದಿಗೆ ಟೂರ್ನಿಯಲ್ಲಿ ಗರಿಷ್ಠ ರನ್‌ ಕಲೆ ಹಾಕಿದರು.

ಸಾಕಷ್ಟು ನೀರು ಕುಡಿಯುವುದರಿಂದಾಗುವ 7 ಪ್ರಯೋಜನಗಳು

Image Credits: Adobe Stock