ದಾಖಲೆ ಬರೆದ ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಂ ಪೋಸ್ಟ್!

By Prasanna Kumar P N
Jul 03, 2024

Hindustan Times
Kannada

ಬ್ಯಾಟಿಂಗ್ ಸೂಪರ್​ ಸ್ಟಾರ್​ ವಿರಾಟ್ ಕೊಹ್ಲಿ ಹೆಸರಿಗೆ ಮತ್ತೊಂದು ಮಹೋನ್ನತ ದಾಖಲೆ ಸೇರ್ಪಡೆಯಾಗಿದೆ.

ಆದರೆ ಈ ಸಲ ದಾಖಲೆ ನಿರ್ಮಿಸಿರುವುದು ಮೈದಾನದಲ್ಲಿ ಅಲ್ಲ. ಬದಲಿಗೆ ಇನ್​ಸ್ಟಾಗ್ರಾಂ​ನಲ್ಲಿ ಎಂಬುದು ವಿಶೇಷ.

ಟಿ20 ವಿಶ್ವಕಪ್​ ಗೆದ್ದ ಬಳಿಕ ಕೊಹ್ಲಿ ಇನ್​ಸ್ಟಾದಲ್ಲಿ ಹಂಚಿಕೊಂಡ ಫೋಟೋಗಳ ಪೋಸ್ಟ್ ಈಗ 20 ಮಿಲಿಯನ್ ಲೈಕ್ಸ್ ಪಡೆದಿದೆ. 

20 ಮಿಲಿಯನ್ಸ್ ಅಂದರೆ 2 ಕೋಟಿಗಿಂತ ಹೆಚ್ಚು ಲೈಕ್ಸ್ ಪಡೆದಿದೆ. ಏಷ್ಯಾದಲ್ಲೇ ಅಧಿಕ ಲೈಕ್ಸ್ ಪಡೆದ 2ನೇ ಇನ್​ಸ್ಟಾಗ್ರಾಂ ಪೋಸ್ಟ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅತಿಹೆಚ್ಚು ಇನ್​ಸ್ಟಾಗ್ರಾಂ ಲೈಕ್ಸ್​ ಪಡೆದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ದಾಖಲೆಗೂ ವಿರಾಟ್ ಕೊಹ್ಲಿ ಪಾಲಾಗಿದೆ.

ಬಿಟಿಎಸ್​ನ ಕೊರಿಯನ್ ಪಾಪ್ ಸಿಂಗರ್ ಕಿಮ್ ಟೇಹ್ಯುಂಗ್ ಈ ಪಟ್ಟಿಯಲ್ಲಿ ಅಗ್ರಸ್ಥಾನದ್ದಾರೆ. 2022ರಲ್ಲಿ ಕಿಮ್ ಹಂಚಿಕೊಂಡ ಈ ಪೋಸ್ಟ್​ಗೆ 2 ಕೋಟಿಗೂ ಹೆಚ್ಚು ಲೈಕ್ಸ್ ಬಂದಿತ್ತು.

ಈ ಮೂಲಕ ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಲೈಕ್ಸ್ ಪಡೆದ ಮೊದಲ ಏಷ್ಯನ್ ಎಂಬ ದಾಖಲೆಯನ್ನು ಕಿಮ್ ಟೇಹ್ಯುಂಗ್ ಬರೆದಿದ್ದರು.

ಇನ್​ಸ್ಟಾ ಇತಿಹಾಸದಲ್ಲಿ ಹೆಚ್ಚು ಲೈಕ್ಸ್ ಗಿಟ್ಟಿಸಿದ ಪೋಸ್ಟ್ ಲಿಯೊನೆಲ್ ಮೆಸ್ಸಿ ಅವರದ್ದು. 2022ರ ಫುಟ್ಬಾಲ್ ವಿಶ್ವಕಪ್ ಗೆದ್ದ ನಂತರ ಮೆಸ್ಸಿ ಹಂಚಿಕೊಂಡ ಫೋಟೋಗೆ 75 ಮಿಲಿಯನ್ (7.5 ಕೋಟಿ) ಲೈಕ್ಸ್ ಸಿಕ್ಕಿತ್ತು.

ಕೇರಳ ಶೈಲಿಯಲ್ಲಿ ಈ ರೀತಿ ಮೊಟ್ಟೆ ಸಾರು ಮಾಡಿ ನೋಡಿ

Pinterest