ಲಸಿತ್ ಮಾಲಿಂಗ ದಾಖಲೆ ಪುಡಿಗಟ್ಟಿದ ವನಿಂದು ಹಸರಂಗ

By Prasanna Kumar P N
Jun 08, 2024

Hindustan Times
Kannada

ಶ್ರೀಲಂಕಾ ದಿಗ್ಗಜ ವೇಗಿ ಲಸಿತ್ ಮಾಲಿಂಗ ಅವರ ದಾಖಲೆಯನ್ನು ವನಿಂದು ಹಸರಂಗ ಮುರಿದಿದ್ದಾರೆ.

ಶ್ರೀಲಂಕಾ ಪರ ಅತ್ಯಧಿಕ ವಿಕೆಟ್​ಗಳನ್ನು ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಹಸರಂಗ ಪಾತ್ರರಾಗಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧ 2 ವಿಕೆಟ್ ಉರುಳಿಸಿದ ನಂತರ ಈ ದಾಖಲೆ ಬರೆದಿದ್ದಾರೆ.

ಶ್ರೀಲಂಕಾ ಪರ ಲಸಿತ್ ಮಾಲಿಂಗ 84 ಪಂದ್ಯಗಳಲ್ಲಿ 107 ವಿಕೆಟ್​ ಪಡೆದಿದ್ದಾರೆ. 

ವನಿಂದು ಹಸರಂಗ 67 ಟಿ20ಐ ಪಂದ್ಯಗಳಲ್ಲಿ 108 ವಿಕೆಟ್ ಉರುಳಿಸಿ ಮಾಲಿಂಗ ಅವರನ್ನು ಹಿಂದಿಕ್ಕಿದ್ದಾರೆ.

ಇವರಿಬ್ಬರ ನಂತರ ನುವಾನ್ ಕುಲಶೇಖರ 66, ಅಜಂತ ಮೆಂಡೀಸ್ 66, ದುಷ್ಮಂತಾ ಚಮೀರಾ 55 ವಿಕೆಟ್ ಪಡೆದಿದ್ದಾರೆ.

ಅತಿಯಾದ ಜಾಮೂನ್ ತಿನ್ನುವುದರಿಂದ ಆಗುವ 7 ಆರೋಗ್ಯ ಸಮಸ್ಯೆಗಳಿವು