ಕ್ರಿಕೆಟಿಗನನ್ನು ಬಲಿ ಪಡೆದ ರಕ್ತ ಕ್ಯಾನ್ಸರ್ ಲಕ್ಷಣಗಳೇನು?
By Prasanna Kumar P N Aug 02, 2024
Hindustan Times Kannada
ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರು ರಕ್ತ ಕ್ಯಾನ್ಸರ್ಗೆ ಜುಲೈ 31ರ ಬುಧವಾರ ಬಲಿಯಾದರು.
ಹಲವು ವರ್ಷಗಳಿಂದ ರಕ್ತ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಂಶುಮಾನ್ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹಾಗಾದರೆ ಮಾರಕ ರಕ್ತದ ಕ್ಯಾನ್ಸರ್ ಎಂದರೇನು? ರೋಗ ಲಕ್ಷಣಗಳೇನು? ಎಂಬುದರ ಮಾಹಿತಿ ಇಲ್ಲಿದೆ.
ರಕ್ತದಲ್ಲಿ ಕ್ಯಾನ್ಸರ್ ಬಂದರೆ ಅದನ್ನು ಬ್ಲಡ್ ಕ್ಯಾನ್ಸರ್ ಎನ್ನುತ್ತಾರೆ. ದೇಹದ ಯಾವುದೇ ಭಾಗದಲ್ಲಿ ಈ ಕ್ಯಾನ್ಸರ್ ಸಂಭವಿಸಬಹುದು.
ದೇಹವು ರಕ್ತ ಕಣಗಳನ್ನು ಹೇಗೆ ಉತ್ಪಾದಿಸುತ್ತದೆ? ಆ ಜೀವಕೋಶಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಮೇಲೆ ರಕ್ತದ ಕ್ಯಾನ್ಸರ್ ಪರಿಣಾಮ ಬೀರುತ್ತದೆ.
ಸಾಮಾನ್ಯ ರಕ್ತಕಣಗಳು ಸೋಂಕಿನ ವಿರುದ್ಧ ಹೋರಾಡುತ್ತವೆ, ದೇಹಕ್ಕೆ ಆಮ್ಲಜನಕ ಸಾಗಿಸುತ್ತವೆ. ಮತ್ತು ರಕ್ತಸ್ರಾವ ನಿಯಂತ್ರಿಸುತ್ತವೆ. ದೇಹವು ರಕ್ತ ಕಣಗಳನ್ನು ತಯಾರಿಸಲು ತೊಂದರೆ ಮಾಡಿದಾಗ ರಕ್ತ ಕ್ಯಾನ್ಸರ್ ಸಂಭವಿಸುತ್ತದೆ.
ರಕ್ತ ಕ್ಯಾನ್ಸರ್ ಲಕ್ಷಣಗಳು: ಮತ್ತೆ ಮತ್ತೆ ಜ್ವರ ಬರುತ್ತದೆ. ನಿರಂತರ ಆಯಾಸ, ದೌರ್ಬಲ್ಯ, ರಾತ್ರಿ ಬೆವರುವಿಕೆ, ಹೊಟ್ಟೆ ನೋವು, ತಲೆನೋವು ಮತ್ತು ಉಸಿರಾಟದ ತೊಂದರೆ ಕಾಣುತ್ತದೆ.
ರಕ್ತದ ಕ್ಯಾನ್ಸರ್ ವಿಧಗಳು: ಲ್ಯುಕೇಮಿಯಾ, ಲಿಂಫೋಮಾ, ಮಲ್ಟಿಪಲ್ ಮೈಲೋಮಾ, ಮೈಲೋಪ್ರೊಲಿಫೆರೇಟಿವ್ ನಿಯೋಪ್ಲಾಸಂ ವಿವಿಧ ರೀತಿಯ ರಕ್ತದ ಕ್ಯಾನ್ಸರ್ಗಳಾಗಿವೆ.
ಹೆಚ್ಚು ಆದಾಯ ಗಳಿಸಲು ಕೌಶಲ್ಯ ಕಲಿಸುವ 6 ಉಚಿತ ಆನ್‌ಲೈನ್ ಕೋರ್ಸ್‌ಗಳು