ವಿರಾಟ್‌ ಕೊಹ್ಲಿ ದಾಖಲೆ ಸರಿಗಟ್ಟಿದ ಯಶಸ್ವಿ ಜೈಸ್ವಾಲ್

By Jayaraj
Feb 26, 2024

Hindustan Times
Kannada

ಇಂಗ್ಲೆಂಡ್‌ ವಿರುದ್ಧ 37 ರನ್‌ ಗಳಿಸುವುದರೊಂದಿಗೆ ಕೊಹ್ಲಿಯ 7 ವರ್ಷ ಹಳೆಯ ದಾಖಲೆ ಸರಿಗಟ್ಟಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಪ್ರಸಕ್ತ ಟೆಸ್ಟ್‌ ಸರಣಿಯಲ್ಲಿ, ಜೈಸ್ವಾಲ್‌ ಈವರೆಗೆ 655 ರನ್‌ ಸಿಡಿಸಿದ್ದಾರೆ.

ಈ ಹಿಂದೆ 2016/17ರ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಕೊಹ್ಲಿ 655 ರನ್‌ ಗಳಿಸಿದ್ದರು.

ಇದೀಗ ವಿರಾಟ್‌ ಮೊತ್ತವನ್ನು ಜೈಸ್ವಾಲ್‌ ಸರಿಗಟ್ಟಿದ್ದಾರೆ.

ಆಂಗ್ಲರ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

ಆಂಗ್ಲರ ವಿರುದ್ಧ ಒಂದೇ ಸರಣಿಯಲ್ಲಿ ಸುನಿಲ್‌ ಗವಾಸ್ಕರ್‌ 774 ಮತ್ತು 732 ರನ್‌ ಗಳಿಸಿದ್ದರು.

ವಿರಾಟ್‌ ಕೊಹ್ಲಿ 692 ಮತ್ತು 655 ರನ್‌ ಗಳಿಸಿದ್ದಾರೆ.

ಇನ್ನು 45 ರನ್‌ ಗಳಿಸಿದರೆ, ಜೈಸ್ವಾಲ್‌ ಕೊಹ್ಲಿ ದಾಖಲೆ ಬ್ರೇಕ್‌ ಮಾಡಲಿದ್ದಾರೆ.‌

ವಿವಾಹಗಳಿಗೆ ಟ್ರೆಂಡ್ ಆಗುತ್ತಿರುವ ಬ್ಲೌಸ್ ಡಿಸೈನ್ ಗಳಿವು