ಮೊಣಕಾಲಿನಲ್ಲಿ ತಿರುಪತಿ ಮೆಟ್ಟಿಲು ಹತ್ತಿದ ನಿತೀಶ್ ಕುಮಾರ್
By Jayaraj
Jan 14, 2025
Hindustan Times
Kannada
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಿತೀಶ್ ಕುಮಾರ್ ರೆಡ್ಡಿ, ಅಭಿಮಾನಿಗಳ ಮನಗೆದ್ದರು.
ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಅಬ್ಬರಿಸಿದರು.
ಶತಕ
ಸರಣಿ ಮುಗಿದು ಭಾರತಕ್ಕೆ ಮರಳಿರುವ 21 ವರ್ಷದ ಆಲ್‌ರೌಂಡರ್, ತಮ್ಮದೇ ರಾಜ್ಯದ ದೇವಸ್ಥಾನವಾದ ತಿರುಪತಿಗೆ ಭೇಟಿ ನೀಡಿದ್ದಾರೆ.
ತಿರುಪತಿ ಭೇಟಿ
ತಿರುಮಲ ದೇವಾಲಯದ ಭೇಟಿ ನೀಡಿದ ಕೆಲವು ದೃಶ್ಯಗಳನ್ನು ನಿತೀಶ್ ಹಂಚಿಕೊಂಡಿದ್ದಾರೆ.
ನಿತೀಶ್ ಮೊಣಕಾಲುಗಳನ್ನು ಊರಿಕೊಂಡು ತಿರುಪತಿ ದೇವಾಲಯದ ಮೆಟ್ಟಿಲುಗಳನ್ನು ಹತ್ತಿದ್ದಾರೆ. ಆ ಮೂಲಕ ತಮ್ಮ ಹರಕೆ ತೀರಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಮೂಲಕ ನಿತೀಶ್ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಆಸೀಸ್ ಸರಣಿಯಲ್ಲಿ ನಿತೀಶ್ 298 ರನ್ ಗಳಿಸಿದರು. ಭಾರತದ ಪರ ಯಶಸ್ವಿ ಜೈಸ್ವಾಲ್ ಬಳಿಕ ಇದು ಎರಡನೇ ಹೆಚ್ಚು ಸ್ಕೋರ್ ಆಗಿದೆ.
298 ರನ್
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ನಿತೀಶ್ ಆಯ್ಕೆಯಾಗಿದ್ದಾರೆ. ಮುಂದೆ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ.
ಟಿ20 ಸರಣಿಗೆ ಆಯ್ಕೆ
Photo: Instagram
ಪದಾರ್ಪಣೆ ಪಂದ್ಯದಲ್ಲೇ ವರುಣ್ ಚಕ್ರವರ್ತಿ ದಾಖಲೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ