ನಿತೀಶ್ ಕುಮಾರ್ ರೆಡ್ಡಿ ಮುದ್ದಾದ ಕುಟುಂಬವಿದು

By Jayaraj
Dec 29, 2024

Hindustan Times
Kannada

ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್‌ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಶತಕ ಬಾರಿಸಿದರು. ಅದರ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ನಿತೀಶ್‌ ಸುದ್ದಿಯಾಗಿದ್ದಾರೆ.

ನಿತೀಶ್ ಇನ್ನಿಂಗ್ಸ್‌ ವೇಳೆ ಎಂಸಿಜಿಯಲ್ಲಿ ಅವರ ಕುಟುಂಬ ಸದಸ್ಯರೂ ಕೂಡಾ ಹಾಜರಿದ್ದರು. ಮಗನ ಶತಕದ ವೇಳೆ ತಂದೆ ಮುತ್ಯಾಲ ರೆಡ್ಡಿ ಭಾವುಕರಾದರು.

ಇನ್ನಿಂಗ್ಸ್ ಮುಗಿದ ನಂತರ ಕುಟುಂಬ ಸದಸ್ಯರು ಮಗನನ್ನು ಭೇಟಿಯಾದರು. ನಿತೀಶ್ ತಮ್ಮ ತಂದೆಯನ್ನು ಅಪ್ಪಿಕೊಂಡು ಭಾವುಕರಾದರು.

ನಿತೀಶ್‌ ಕುಟುಂಬದಲ್ಲಿ ತಂದೆ-ತಾಯಿ ಹಾಗೂ ಸಹೋದರಿ ಇದ್ದಾರೆ. ತಾಯಿಯ ಹೆಸರು ಮಾನಸ ಜ್ಯೋತ್ಸ್ನಾ ಮತ್ತು ಸಹೋದರಿಯ ಹೆಸರು ತೇಜಸ್ವಿ.

ನಿತೀಶ್ ಕುಮಾರ್ ರೆಡ್ಡಿ ಅವರ ಕ್ರಿಕೆಟ್‌ ವೃತ್ತಿಬದುಕಿನಲ್ಲಿ ಅವರ ಇಡೀ ಕುಟುಂಬವು ಜೊತೆಗೆ ನಿಂತಿದೆ.

ನಿತೀಶ್ 5ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದರು. 12-13 ವರ್ಷದವರಾಗಿದ್ದಾಗ, ಮಗನ ವೃತ್ತಿಜೀವನ ರೂಪಿಸುವ ಸಲುವಾಗಿ ತಂದೆ ತಮ್ಮ ಕೆಲಸ ಬಿಟ್ಟರು.

ತಂದೆ ಮುತ್ಯಾಲ ರೆಡ್ಡಿ, ಹಿಂದೂಸ್ತಾನ್ ಜಿಂಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾಜಸ್ಥಾನಕ್ಕೆ ವರ್ಗಾವಣೆಯಾದಾಗ, ಮಗನಿಗಾಗಿ ಕೆಲಸ ಬಿಟ್ಟು ದೊಡ್ಡ ತ್ಯಾಗ ಮಾಡಿದರು.

ನಿತೀಶ್ ಅವರಂತೆ ಅವರ ತಂದೆ ಕೂಡ ಸ್ಟೈಲಿಶ್ ಆಗಿದ್ದಾರೆ. ಇನ್ನು ತಾಯಿ ಮತ್ತು ಸಹೋದರಿ ಕೂಡಾ ಸ್ಟೈಲಿಶ್ ಆಗಿದ್ದಾರೆ.

Instagram

ಐಪಿಎಲ್‌ ವೇಳೆಯೂ ನಿತೀಶ್ ರೆಡ್ಡಿ ಅವರ ಕುಟುಂಬ ಸದಸ್ಯರು ಸ್ಟೇಡಿಯಂಗೆ ಬಂದು ಪಂದ್ಯ ವೀಕ್ಷಿಸುತ್ತಾರೆ.

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ