ಶ್ರೀಲಂಕಾ ವಿರುದ್ಧ ಭಾರತದ 317 ರನ್‌ ಗೆಲುವಿಗೆ 2 ವರ್ಷ

AFP

By Jayaraj
Jan 15, 2025

Hindustan Times
Kannada

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ರನ್‌ ಅಂತರದಲ್ಲಿ ಅತಿ ದೊಡ್ಡ ಗೆಲುವು ಸಾಧಿಸಿದ್ದು ಭಾರತ. 2023ರ ಜನವರಿ 15ರಂದು ಭಾರತ ಇತಿಹಾಸ ನಿರ್ಮಿಸಿತು.

ತಿರುವನಂತಪುರದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು ಭಾರತ ಬರೋಬ್ಬರರಿ 317 ರನ್‌ಗಳಿಂದ ಸೋಲಿಸಿತು. ಏಕದಿನ ಕ್ರಿಕೆಟ್‌ನಲ್ಲಿ ಅತಿದೊಡ್ಡ ಗೆಲುವಿನ ಅಂತರ ಇದಾಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಗಳಿಸಿತು. 

ಶುಭ್ಮನ್ ಗಿಲ್ (97 ಎಸೆತಗಳಲ್ಲಿ 116) ಮತ್ತು ವಿರಾಟ್ ಕೊಹ್ಲಿ (110 ಎಸೆತಗಳಲ್ಲಿ 166) ಇಬ್ಬರೂ ಶತಕ ಸಿಡಿಸಿದರು.

391 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು.

ಮೊಹಮ್ಮದ್ ಸಿರಾಜ್ ನೇತೃತ್ವದ ಭಾರತೀಯ ಬೌಲಿಂಗ್ ದಾಳಿಯು ಶ್ರೀಲಂಕಾದ ಬ್ಯಾಟಿಂಗ್ ಲೈನ್ಅಪ್ ಅನ್ನು ನಾಶಪಡಿಸಿತು. ಸಿರಾಜ್ 32 ರನ್ ನೀಡಿ 4 ವಿಕೆಟ್ ಪಡೆದರು.

ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.‌ 

ಶ್ರೀಲಂಕಾ ತಂಡ 22 ಓವರ್‌ಗಳಲ್ಲಿ ಕೇವಲ 73 ರನ್‌ಗಳಿಗೆ ಆಲೌಟ್ ಆಯಿತು. ಗೆಲುವಿನೊಂದಿಗೆ ಭಾರತ ಸರಣಿಯನ್ನು 3-0 ಅಂತರದಿಂದ ವೈಟ್‌ವಾಶ್ ಮಾಡಿತು.

Photos: Agencies file

ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್‌