ಐಪಿಎಲ್ 18ನೇ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
By Jayaraj
Mar 22, 2025
Hindustan Times
Kannada
ಈ ಹಿಂದೆ ರಹಾನೆ ಇನ್ನೆರಡು ತಂಡಗಳನ್ನು ಮುನ್ನಡೆಸಿದ್ದರು. ಐಪಿಎಲ್‌ನಲ್ಲಿ ಅವರು ಈ ಬಾರಿ ಮೂರನೇ ತಂಡದ ನಾಯಕತ್ವ ವಹಿಸುತ್ತಿದ್ದಾರೆ.
ಐಪಿಎಲ್‌ನಲ್ಲಿ ಮೂರು ತಂಡಗಳನ್ನು ಮುನ್ನಡೆಸಿದ ನಾಯಕರು ಯಾರ್ಯಾರು ಎಂಬುದನ್ನು ನೋಡೋಣ.
ರಹಾನೆ ಈ ವರ್ಷ ಈ ಪಟ್ಟಿಗೆ ಸೇರಲಿದ್ದಾರೆ. ಈ ಹಿಂದೆ ಮೂವರು ನಾಯಕರು 3 ಐಪಿಎಲ್ ತಂಡಗಳನ್ನು ಮುನ್ನಡೆಸಿದ್ದಾರೆ.
ಪ್ರಸ್ತುತ ಕೆಕೆಆರ್ ನಾಯಕನಾಗಿರುವ ರಹಾನೆ ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದರು.
ಎಂಎಸ್ ಧೋನಿ ಈ ದಾಖಲೆ ಮಾಡಿಲ್ಲ. ಅವರು ಸಿಎಸ್‌ಕೆ ಮತ್ತು ಆರ್‌ಪಿಎಸ್‌ಜಿ ತಂಡಗಳನ್ನು ಮುನ್ನಡೆಸಿದ್ದಾರೆ.
ಸ್ಟೀವ್ ಸ್ಮಿತ್ ಅವರು ಪುಣೆ ವಾರಿಯರ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಮುನ್ನಡೆಸಿದ್ದಾರೆ.
ಕುಮಾರ ಸಂಗಕ್ಕಾರ ಅವರು ಡೆಕ್ಕನ್ ಚಾರ್ಜರ್ಸ್, ಎಸ್‌ಆರ್‌ಎಚ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದಾರೆ.
ಮಹೇಲ ಜಯವರ್ಧನೆ ಕೊಚ್ಚಿ ಟಸ್ಕರ್ಸ್ ಕೇರಳ, ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದಾರೆ.
ಶ್ರೇಯಸ್ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್ ಹಾಗೂ ಈ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ವಿಷ್ಣು ಚಾಲೀಸವನ್ನು ಯಾವಾಗ, ಹೇಗೆ ಪಠಿಸಬೇಕು; ಏನೆಲ್ಲಾ ಪ್ರಯೋಜನಗಳಿವೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ