ರಣಜಿ ಟ್ರೋಫಿ ಆಟಗಾರರಿಗೆ ದಿನಕ್ಕೆ, ಪಂದ್ಯಕ್ಕೆ ಸಿಗುವ ವೇತನವೆಷ್ಟು?

By Prasanna Kumar P N
Jan 23, 2025

Hindustan Times
Kannada

ರಣಜಿ ಟ್ರೋಫಿಯ ಎಲೈಟ್ ಪಂದ್ಯಗಳು ಇಂದಿನಿಂದ (ಜನವರಿ 23) ಆರಂಭಗೊಂಡಿದೆ. 2024ರ ಕೊನೆಯಲ್ಲಿ ರಣಜಿ ಟ್ರೋಫಿ ಮೊದಲ ಹಂತವು ಮುಕ್ತಾಯಗೊಂಡಿತ್ತು.

ಬಿಸಿಸಿಐ ಆದೇಶದ ನಂತರ ರೋಹಿತ್​ ಶರ್ಮಾ, ರಿಷಭ್ ಪಂತ್, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್ ಸೇರಿ ರಾಷ್ಟ್ರೀಯ ತಂಡದ ಆಟಗಾರರು ಸಹ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದಾರೆ.

ಭಾರತ ತಂಡದ ಸ್ಟಾರ್ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದಾರೆ. ಆದರೆ, ರಣಜಿ ಆಡುತ್ತಿರುವ ಆಟಗಾರರು ಒಂದೇ ಪಂದ್ಯಕ್ಕೆ ಗಳಿಸುವ ಮೊತ್ತ ಎಷ್ಟು ಗೊತ್ತಾ?

ಟೀಂ ಇಂಡಿಯಾ ಪರ ಆಡುವ ಆಟಗಾರರು ವಾರ್ಷಿಕ ಒಪ್ಪಂದದ ರೂಪದಲ್ಲಿ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ರಣಜಿ ಪಂದ್ಯ ಶುಲ್ಕ ಪ್ರತ್ಯೇಕ.

ರಣಜಿ ಟ್ರೋಫಿ ಪಂದ್ಯಗಳನ್ನು ಸಾಮಾನ್ಯವಾಗಿ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಆದರೆ, ನಾಕೌಟ್ ಪಂದ್ಯಗಳು ಟೆಸ್ಟ್ ಪಂದ್ಯಗಳಂತೆ ಐದು ದಿನಗಳ ಕಾಲ ನಡೆಯುತ್ತವೆ.

ರಣಜಿ ಆಟಗಾರರು ಅನುಭವದ ಆಧಾರದ ಮೇಲೆ ವಿಭಿನ್ನ ಸಂಬಳ ಗಳಿಸುತ್ತಾರೆ. 41ಕ್ಕೂ ಹೆಚ್ಚು ಪಂದ್ಯಗಳಲ್ಲಿ ಕಣಕ್ಕಿಳಿದ ಆಟಗಾರರು ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆದರೆ, ಅವರು ಒಂದು ದಿನಕ್ಕೆ 60 ಸಾವಿರ ವೇತನ ಪಡೆಯುತ್ತಾರೆ.

ನಾಲ್ಕು ದಿನಗಳ ಆಡಿದರೆ (ಒಂದು ಪಂದ್ಯಕ್ಕೆ) 2.40 ಲಕ್ಷ ರೂಪಾಯಿ ಗಳಿಸುತ್ತಾರೆ. ಆದರೆ, ಈ ವಿಭಾಗದ ಮೀಸಲು ಆಟಗಾರರು ದಿನಕ್ಕೆ 30 ಸಾವಿರ ರೂ ಗಳಿಸುತ್ತಾರೆ.

21 ರಿಂದ 40 ಪಂದ್ಯಗಳ ಅನುಭವ ಹೊಂದಿರುವ ಆಟಗಾರರು ದಿನಕ್ಕೆ 50 ಸಾವಿರ ರೂಪಾಯಿ ಮತ್ತು ಪ್ರತಿ ಪಂದ್ಯಕ್ಕೆ 2 ಲಕ್ಷ ರೂ ಗಳಿಸುತ್ತಾರೆ. ಈ ವರ್ಗದ ಮೀಸಲು ಆಟಗಾರರಿಗೆ ದಿನಕ್ಕೆ 25,000 ಸಿಗುತ್ತದೆ.

1-20 ಪಂದ್ಯಗಳನ್ನು ಆಡುವ ಆಟಗಾರರಿಗೆ ದಿನಕ್ಕೆ 40 ಸಾವಿರ ರೂ ಮತ್ತು ಇಡೀ ಪಂದ್ಯಕ್ಕೆ 1.60 ಲಕ್ಷ ರೂ ಪಡೆಯುತ್ತಾರೆ. ಈ ವಿಭಾಗದಲ್ಲಿ ಮೀಸಲು ಆಟಗಾರರ ವೇತನ ದಿನಕ್ಕೆ 20 ಸಾವಿರ ರೂಪಾಯಿ ಪಡೆಯಲಿದ್ದಾರೆ.

ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು

Flickr