ಸಿಎಸ್‌ಕೆ ವಿರುದ್ಧ ವಿರಾಟ್ ವಿಶ್ವದಾಖಲೆಗೆ ಬೇಕು ಕೇವಲ 76 ರನ್

By Jayaraj
May 18, 2024

Hindustan Times
Kannada

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಎದುರಾಗುತ್ತಿದೆ.

ಈ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲು ತಲುಪಲು ಆರ್‌ಸಿಬಿಯ ವಿರಾಟ್‌ ಕೊಹ್ಲಿ ಸಜ್ಜಾಗಲಿದ್ದಾರೆ.

ಈ ದಾಖಲೆ ನಿರ್ಮಿಸಲು ಕೊಹ್ಲಿಗೆ ಕೇವಲ 76 ರನ್ ಅಗತ್ಯವಿದೆ.

ಇದು ಸಾಧ್ಯವಾದರೆ, ಐಪಿಎಲ್‌ ಇತಿಹಾಸದಲ್ಲಿ 8000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ನಿರ್ಮಿಸಲಿದ್ದಾರೆ.

ಈವರೆಗೆ ಕೊಹ್ಲಿ ಐಪಿಎಲ್‌ನಲ್ಲಿ 250 ಪಂದ್ಯಗಳ 242 ಇನ್ನಿಂಗ್ಸ್‌ ಆಡಿದ್ದಾರೆ.

ಅದರಲ್ಲಿ 131.8ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ ಬರೋಬ್ಬರಿ 7924 ರನ್ ಗಳಿಸಿದ್ದಾರೆ.

ಟೂರ್ನಿ ಇತಿಹಾಸದಲ್ಲಿ ಅತಿ ಹೆಚ್ಚು, ಅಂದರೆ 8 ಶತಕ ಹಾಗೂ 55 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಐಪಿಎಲ್ 2024ರಲ್ಲಿಯೂ, ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಆರೇಂಜ್‌ ಕ್ಯಾಪ್‌ ಧರಿಸಿದ್ದಾರೆ. 

ಈವರೆಗೆ 13 ಪಂದ್ಯಗಳಲ್ಲಿ ಆಡಿ 155.16ರ ಸ್ಟ್ರೈಕ್ ರೇಟ್‌ನಲ್ಲಿ 661 ರನ್ ಗಳಿಸಿದ್ದಾರೆ.

ತೂಕ ಕಡಿಮೆ ಮಾಡಲು  5 ಸರಳ ಯೋಗಾಸನಗಳು 

Pexel