ಐಪಿಎಲ್ 2025 ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐತಿಹಾಸಿಕ ದಾಖಲೆ ನಿರ್ಮಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ 24ನೇ ಲೀಗ್ ಪಂದ್ಯದಲ್ಲಿ ವೇಗವಾಗಿ 50 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ ಐಪಿಎಲ್ 2ನೇ ತಂಡ ಎಂಬ ಹೆಗ್ಗಳಿಕೆಗೆ ಆರ್ಸಿಬಿ ಪಾತ್ರವಾಗಿದೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 3 ಓವರ್ಗಳಲ್ಲಿ 53 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದೆ.
ಮೊದಲ ಓವರ್ನಲ್ಲಿ 7 ರನ್, 2ನೇ ಓವರ್ನಲ್ಲಿ 16 ರನ್, 3ನೇ ಓವರ್ನಲ್ಲಿ 30 ರನ್ ಬಾರಿಸಿ ಹೊಸ ಮೈಲಿಗಲ್ಲು ತಲುಪಿತು.
ಮತ್ತೊಂದು ವಿಶೇಷ ಏನೆಂದರೆ ಮೊದಲ ಸ್ಥಾನದಲ್ಲಿರುವ ದಾಖಲೆಯೂ ಆರ್ಸಿಬಿ ಹೆಸರಿನಲ್ಲೇ ಇದೆ. 3ನೇ ಸ್ಥಾನವೂ ಆರ್ಸಿಬಿಯದ್ದೇ ಇದೆ.
2011ರಲ್ಲಿ ಕೇವಲ 2.3 ಅಂದರೆ 15 ಎಸೆತಗಳಲ್ಲೇ ಕೊಚ್ಚಿ ಟಸ್ಕಸ್ ಕೇರಳ ವಿರುದ್ಧ ಆರ್ಸಿಬಿ 50 ರನ್ಗಳ ಗಡಿ ದಾಟಿತ್ತು. ಈ ದಾಖಲೆ ಇನ್ನೂ ಅಜೇಯವಾಗಿದೆ.
2025ರ ಐಪಿಎಲ್ನಲ್ಲಿ ವೇಗವಾಗಿ 50 ಪ್ಲಸ್ ರನ್ ಬಾರಿಸಿದ ಮೊದಲ ಎಂಬ ಹಿರಿಮೆಗೆ ಪಾತ್ರವಾಗಿದೆ.
ಮೂರನೇ ಸ್ಥಾನದಲ್ಲೂ ಇರುವ ಆರ್ಸಿಬಿ 2023ರಲ್ಲಿ ಗುಜರಾತ್ ಟೈಟಾನ್ಸ್ 3.1 ಓವರ್ಗಳಲ್ಲಿ 50 ರನ್ ಬಾರಿಸಿತ್ತು.