IPL 2025: ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ

By Jayaraj
Mar 16, 2025

Hindustan Times
Kannada

ಮಾರ್ಚ್‌ 22ರಿಂದ ಬಹುನಿರೀಕ್ಷಿತ ಐಪಿಎಲ್‌ ಟೂರ್ನಿ ಆರಂಭವಾಗುತ್ತಿದೆ.

ಟೂರ್ನಿಯಲ್ಲಿ ಆರ್‌ಸಿಬಿ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

10 ಟಿ20 ಶತಕ ಸಿಡಿಸಿದ ಭಾರತದ ಮೊದಲ ಆಟಗಾರನಾಗಲು ಕೊಹ್ಲಿ ಕೇವಲ 1 ಶತಕ ಹಿಂದಿದ್ದಾರೆ.

ಈವರೆಗೆ ಆಡಿದ 399 ಟಿ20 ಪಂದ್ಯಗಳಲ್ಲಿ ಅವರು 9 ಸೆಂಚುರಿ ಸಿಡಿಸಿದ್ದಾರೆ.

ಐಪಿಎಲ್‌ನಲ್ಲಿ ದಾಖಲೆಯ 8 ಶತಕ ಬಾರಿಸಿರುವ ವಿರಾಟ್‌, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1 ಶತಕ ಗಳಿಸಿದ್ದಾರೆ.

2016ರ ಐಪಿಎಲ್‌ ಒಂದರಲ್ಲೇ ಕೊಹ್ಲಿ 4 ಶತಕ ಸಿಡಿಸಿರುವುದು ದಾಖಲೆ.

ಚುಟುಕು ಸ್ವರೂಪದ ಕ್ರಿಕೆಟ್‌ನಲ್ಲಿ ಕಿಂಗ್‌ ಕೊಹ್ಲಿ 97 ಅರ್ಧಶತಕ ಬಾರಿಸಿದ್ದಾರೆ.

ಆರ್‌ಸಿಬಿ ತಂಡವು ಈ ಬಾರಿ ಮಾ. 22ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಕಣಕ್ಕಿಳಿಯಲಿದೆ.

ಈ ಬಾರಿ ರಜತ್‌ ಪಾಟೀದಾರ್‌ ತಂಡವನ್ನು ಮುನ್ನಡೆಸಲಿದ್ದಾರೆ. ಮಾಜಿ ನಾಯಕ ಡುಪ್ಲೆಸಿಸ್‌ ಅವರನ್ನು ತಂಡ ಕೈಬಿಟ್ಟಿದೆ.

ವಿಷ್ಣು ಚಾಲೀಸವನ್ನು ಯಾವಾಗ, ಹೇಗೆ ಪಠಿಸಬೇಕು; ಏನೆಲ್ಲಾ ಪ್ರಯೋಜನಗಳಿವೆ