ಕರುಣ್ ನಾಯರ್ ಕರ್ನಾಟಕ ಪರ ಆಡುತ್ತಿಲ್ಲವೇಕೆ?
PTI
By Jayaraj
Jan 05, 2025
Hindustan Times
Kannada
ವಿಜಯ್ ಹಜಾರೆ ಟ್ರೋಫಿಯಲ್ಲಿ ಕನ್ನಡಿಗ ಕರುಣ್ ನಾಯರ್ ಅಬ್ಬರಿಸುತ್ತಿದ್ದಾರೆ. ಇತ್ತೀಚೆಗೆ ನೂತನ ದಾಖಲೆ ನಿರ್ಮಿಸಿದ ಬಳಿಕ ಹೆಚ್ಚು ಸುದ್ದಿಯಲ್ಲಿದ್ದಾರೆ.
PTI
ಔಟಾಗದೆ ಅತಿ ಹೆಚ್ಚು ರನ್ ಕಲೆ ಹಾಕುವ ಮೂಲಕ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕರುಣ್ ಹೊಸ ದಾಖಲೆ ಬರೆದಿದ್ದಾರೆ.
PTI
ಕರುಣ್ ನಾಯರ್ ಕನ್ನಡಿಗನೆಂದು ಕರೆಸಿಕೊಂಡರೂ ಅವರು ಈಗ ಕರ್ನಾಟಕ ರಾಜ್ಯ ತಂಡದ ಪರ ಆಡುತ್ತಿಲ್ಲ. ಬದಲಿಗೆ ವಿದರ್ಭ ಪರ ಆಡುತ್ತಿದ್ದಾರೆ.
PTI
ಹಾಗಿದ್ದರೆ, ಕರ್ನಾಟಕದ ಮಾಜಿ ಆಟಗಾರ ಕರ್ನಾಟಕ ತಂಡ ತೊರೆದಿದ್ದು ಏಕೆ ಎಂಬ ಪ್ರಶ್ನೆ ಹಲವರಲ್ಲಿದೆ.
Instagram
ಕರ್ನಾಟಕ ರಣಜಿ ಟ್ರೋಫಿ ಗೆಲ್ಲಲು ನೆರವಾಗಿದ್ದ ಆಟಗಾರ, ಆ ತಂಡವನ್ನು ತೊರೆದು ಹೆಚ್ಚಿನ ಅವಕಾಶಕ್ಕಾಗಿ ವಿದರ್ಭ ಸೇರಿಕೊಂಡಿದ್ದಾರೆ.
Instagram
ಕರ್ನಾಟಕ ತಂಡದಲ್ಲಿ ಕರುಣ್‌ಗೆ ನಿರೀಕ್ಷಿತ ಅವಕಾಶಗಳು ಸಿಗಲಿಲ್ಲ. ಇದು ಕರುಣ್ ಬೇಸರಕ್ಕೆ ಕಾರಣವಿರಬಹುದು.
Instagram
ಪದಾರ್ಪಣೆ ಮಾಡಿದ ರಣಜಿ ಆವೃತ್ತಿಯಲ್ಲೇ ಅಮೋಘ ಪ್ರದರ್ಶನ ನೀಡಿದ್ದ ಕರುಣ್, ಕರ್ನಾಟಕ ತಂಡ ಟ್ರೋಫಿ ಗೆಲ್ಲಲು ನೆರವಾಗಿದ್ದರು. ಬರುಬರುತ್ತಾ ಅವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ.
Instagram
ದೇಶಿಯ ಕ್ರಿಕೆಟ್‌ನಲ್ಲಿ ಹೆಚ್ಚು ಆಡುವ ಅವಕಾಶಕ್ಕಾಗಿ ಕರುಣ್ ಕಾಯುತ್ತಿದ್ದರು. ವಿದರ್ಭ ತಂಡದ ಪರ ಕರಿಯರ್ ಬೆಳೆಸುವ ಅವಕಾಶ ಸಿಕ್ಕಿದ ಕಾರಣಕ್ಕೆ ಆ ತಂಡ ಸೇರಿಕೊಂಡಿದ್ದಾರೆ.
Instagram
ಅವಕಾಶವನ್ನು ಸದ್ಬಳಕೆ ಮಾಡಿರುವ ಕರುಣ್, ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ಪರ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.
Instagram
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ತ್ರಿಶತಕ ಸಿಡಿಸಿದ ಕೇವಲ ಎರಡನೇ ಆಟಗಾರನಾಗಿರುವ ಕರುಣ್‌ಗೆ ಟೀಮ್ ಇಂಡಿಯಾದಲ್ಲೂ ಅವಕಾಶ ಸಿಗದಿರುವುದು ವಿಪರ್ಯಾಸ.
Instagram
ದಾನದ ನಿಯಮಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ