ರಣಜಿ ಆಡ್ತೀನಿ ಎಂದು ಬಿಸಿಸಿಐಗೆ ಪರೋಕ್ಷವಾಗಿ ಗುಮ್ಮಿದ ರೋಹಿತ್ ಶರ್ಮಾ

By Prasanna Kumar P N
Jan 18, 2025

Hindustan Times
Kannada

ಟೆಸ್ಟ್ ಕ್ರಿಕೆಟ್​ನಲ್ಲಿ ವೈಫಲ್ಯ ಅನುಭವಿಸಿರುವ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅವರು ಮುಂಬೈ ಪರ ರಣಜಿ ಟ್ರೋಫಿ ಆಡುವುದನ್ನು ಖಚಿತಪಡಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಮತ್ತು ಇಂಗ್ಲೆಂಡ್ ಸರಣಿಗೆ ತಂಡ ಪ್ರಕಟಿಸುವ ವೇಳೆ ಕೇಳಲಾದ ಪ್ರಶ್ನೆಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಜನವರಿ 23ರಂದು ಜಮ್ಮು-ಕಾಶ್ಮೀರ ವಿರುದ್ಧ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.

ಇದರೊಂದಿಗೆ 10 ವರ್ಷಗಳ ನಂತರ ರಣಜಿ ಆಡಲು ರೋಹಿತ್​ ಸಜ್ಜಾಗಿದ್ದಾರೆ. 2015ರ ನವೆಂಬರ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಕೊನೆಯ ಬಾರಿಗೆ ರಣಜಿ ಆಡಿದ್ದರು.

ನಾನು ರಣಜಿ ಆಡುತ್ತೇನೆ ಎಂದ ರೋಹಿತ್​, ಯಾವೊಬ್ಬ ಆಟಗಾರನೂ ದೇಶೀಯ ರೆಡ್​ ಬಾಲ್ ಕ್ರಿಕೆಟ್​ ಅನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಪರೋಕ್ಷವಾಗಿ ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.

ಪ್ರತಿಯೊಬ್ಬ ಆಟಗಾರನೂ ದೇಶೀಯ ಕ್ರಿಕೆಟ್ ಆಡಬೇಕು ಎಂದಿರುವ ಬಿಸಿಸಿಐ ಹೇಳಿಕೆಗೆ ಪ್ರತಿಕ್ರಿಯಿಸಿ, ವರ್ಷಪೂರ್ತಿ ಬಿಡುವಿಲ್ಲದ ವೇಳಾಪಟ್ಟಿಯಿಂದ ಆಟಗಾರರಿಗೆ ವಿಶ್ರಾಂತಿಯೂ ಬೇಕು ಎಂದಿದ್ದಾರೆ.

ಕಳೆದ 6-7 ವರ್ಷಗಳಿಂದ ನಿಯಮಿತವಾಗಿ ಕ್ರಿಕೆಟ್ ಆಡುತ್ತಿದ್ದೇನೆ. ನಾನು ಮನೆಯಲ್ಲಿ ಕುಳಿತುಕೊಂಡಿದ್ದೇ ಕಡಿಮೆ. ಐಪಿಎಲ್ ಬಳಿಕ ವಿಶ್ರಾಂತಿ ಸಿಕ್ಕರೂ ಆಗ ದೇಶೀಯ ಕ್ರಿಕೆಟ್ ಇರುವುದಿಲ್ಲ ಎಂದಿದ್ದಾರೆ.

ದೇಶೀಯ ಕ್ರಿಕೆಟ್ ಸೆಪ್ಟೆಂಬರ್​​ನಿಂದ ಆರಂಭವಾಗಲಿದ್ದು, ಫೆಬ್ರವರಿ, ಮಾರ್ಚ್​ನೊಳಗೆ ಅದು ಮುಕ್ತಾಯಗೊಳ್ಳಲಿದೆ. ಇದೇ ಅವಧಿಯಲ್ಲಿ ಟೀಮ್ ಇಂಡಿಯಾ ಅನೇಕ ಸರಣಿಗಳಲ್ಲಿ ನಿರತವಾಗಿರುತ್ತದೆ ಎಂದು ರೋಹಿತ್​ ಹೇಳಿದ್ದಾರೆ.

ಬಿಡುವಿಲ್ಲದೆ ವೇಳಾಪಟ್ಟಿಯಿಂದಾಗಿ ನಿರಂತರ ಕ್ರಿಕೆಟ್ ಆಡುತ್ತಿದ್ದೇವೆ. ಈ ಹಂತದಲ್ಲಿ ಸ್ವಲ್ಪ ಸಮಯ ವಿರಾಮವೂ ಅಗತ್ಯ ಇರುತ್ತದೆ. ಒಂದು ಸರಣಿಯ ನಂತರ ಮತ್ತೊಂದು ಸರಣಿಗೆ ಮನಸ್ಸು ತಾಜಾತನದಿಂದ ಇರುವುದು ಅಗತ್ಯ ಎಂದು ರೋಹಿತ್ ಹೇಳಿದ್ದಾರೆ.

ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ