ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್
By Jayaraj
Mar 23, 2025
Hindustan Times
Kannada
ಐಪಿಎಲ್ 18ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸಿಎಸ್‌ಕೆ ವಿರುದ್ಧ ಮೊದಲ ಪಂದ್ಯವಾಡುತ್ತಿದೆ.
ಚೆಪಾಕ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನುಭವಿ ಆಟಗಾರ ಅನಗತ್ಯ ದಾಖಲೆ ನಿರ್ಮಿಸಿದ್ದಾರೆ.
ಪಂದ್ಯದಲ್ಲಿ ಕೇವಲ 4 ಎಸೆತ ಎದುರಿಸಿದ ಹಿಟ್‌ಮ್ಯಾನ್, ಮೊದಲ ಓವರ್‌ನಲ್ಲೇ ಔಟಾದರು.
ಇದರೊಂದಿಗೆ, ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಡಕೌಟ್ (0 ರನ್) ಆದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ರೋಹಿತ್ ಶರ್ಮಾ ಇದುವರೆಗೆ ಒಟ್ಟು 18 ಬಾರಿ ಡಕೌಟ್ ಆಗಿದ್ದಾರೆ.
ಆ ಮೂಲಕ ಈ ಹಿಂದೆ 18 ಬಾರಿ ಡಕೌಟ್ ಆಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್, ಹಾಗೂ ದಿನೇಶ್ ಕಾರ್ತಿಕ್ ದಾಖಲೆ ಸರಿಗಟ್ಟಿದ್ದಾರೆ.
ಐಪಿಎಲ್‌ನಲ್ಲಿ ಅತಿಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರ ಪಟ್ಟಿಯಲ್ಲಿ ಈ ಮೂವರು ಆಟಗಾರರು ಅಗ್ರಸ್ಥಾನದಲ್ಲಿದ್ದಾರೆ.
ಪಿಯೂಷ್ ಚಾವ್ಲಾ ಹಾಗೂ ಸುನಿಲ್ ನರೈನ್ 16 ಬಾರಿ ಡಕೌಟ್ ಆಗಿದ್ದಾರೆ.
ವಿಷ್ಣು ಚಾಲೀಸವನ್ನು ಯಾವಾಗ, ಹೇಗೆ ಪಠಿಸಬೇಕು; ಏನೆಲ್ಲಾ ಪ್ರಯೋಜನಗಳಿವೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ