ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿ ಅನಗತ್ಯ ದಾಖಲೆ ಬರೆದ ರೋಹಿತ್ ಶರ್ಮಾ
By Jayaraj
Dec 27, 2024
Hindustan Times
Kannada
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳಪೆ ಫಾರ್ಮ್‌ನಲ್ಲಿದ್ದಾರೆ.
ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ರೋಹಿತ್ ಶರ್ಮಾ ಕೇವಲ ಒಂದಂಕಿ ಮೊತ್ತಕ್ಕೆ ಔಟಾದರು.
5 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದ್ದಾಗ ಪ್ಯಾಟ್ ಕಮಿನ್ಸ್ ವಿಕೆಟ್ ಪಡೆದರು.
ಕಳೆದ ಎಂಟು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಒಮ್ಮೆಯೂ 18ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕೊನೆಯ ಬಾರಿ ಅವರು ಅರ್ಧಶತಕ ಗಳಿಸಿದ್ದರು.
ಎಂಸಿಜಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಮೊದಲ ಇನ್ನಿಂಗ್ಸ್‌ನಲ್ಲಿ ಕಮಿನ್ಸ್ ಎಸೆತದಲ್ಲಿ ಔಟಾದ ರೋಹಿತ್ ಅನಗತ್ಯ ದಾಖಲೆ ಬರೆದರು.
ಇದು ಐದನೇ ಬಾರಿ ರೋಹಿತ್ ಶರ್ಮಾ ಅವರನ್ನು ಪ್ಯಾಟ್ ಕಮಿನ್ಸ್ ಔಟ್ ಮಾಡಿದರು.
ಒಂದು ತಂಡದ ನಾಯಕ ಎದುರಾಳಿ ತಂಡದ ನಾಯಕನನ್ನು ಔಟ್ ಮಾಡಿದ ಪಟ್ಟಿಯಲ್ಲಿ ಕಮಿನ್ಸ್ ಜಂಟಿಯಾಗಿ ಮೊದಲ ಸ್ಥಾನ ಪಡೆದಿದ್ದಾರೆ.
ಈ ಹಿಂದೆ ಆಸೀಸ್ ನಾಯಕ ರಿಕಿ ಬೆನಾಡ್, ಇಂಗ್ಲೆಂಡ್ ನಾಯಕ ಟೆಡ್ ಡೆಕ್ಸ್ಟರ್ ಅವರನ್ನು ಕೂಡಾ ಐದು ಬಾರಿ ಔಟ್ ಮಾಡಿದ್ದರು.
PTI
ದೇಹಾರೋಗ್ಯ ವೃದ್ಧಿಸುವ ಹುಳಿ, ಕಹಿ ರುಚಿ ಹೊಂದಿರುವ ಆಹಾರಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ