ಟೆಸ್ಟ್​ ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾ ದಾಖಲೆ

By Prasanna Kumar P N
Jan 02, 2025

Hindustan Times
Kannada

2013ರಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ರೋಹಿತ್​ ಶರ್ಮಾ 67 ಪಂದ್ಯಗಳ ಪೈಕಿ 116 ಇನ್ನಿಂಗ್ಸ್​​ ಆಡಿದ್ದಾರೆ.

40.57ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಕಲೆ ಹಾಕಿರುವ ಹಿಟ್​ಮ್ಯಾನ್, 4031 ರನ್ ಕಲೆ ಹಾಕಿದ್ದಾರೆ.

ಅವರ ಖಾತೆಯಲ್ಲಿ ಒಟ್ಟು 12 ಟೆಸ್ಟ್​​ ಶತಕ ಮತ್ತು 18 ಅರ್ಧಶತಕಗಳು ದಾಖಲಾಗಿವೆ.

ಹಿಟ್​ಮ್ಯಾನ್ 2019ರಲ್ಲಿ ರಾಂಚಿಯಲ್ಲಿ ಸೌತ್ ಆಫ್ರಿಕಾ ವಿರುದ್ಧ 212 ರನ್ ಗಳಿಸಿದ್ದು ಅವರ ವೈಯಕ್ತಿಕ ಗರಿಷ್ಠ ಸ್ಕೋರ್.

ರೋಹಿತ್​ ಟೆಸ್ಟ್​ ನಾಯಕನಾಗಿ 30.58ರ ಬ್ಯಾಟಿಂಗ್​ ಸರಾಸರಿಯಲ್ಲಿ 4 ಶತಕ ಸಹಿತ 1254 ರನ್ ಸಿಡಿಸಿದ್ದಾರೆ. ಹಲವು ಅರ್ಧಶತಕಗಳು ಸೇರಿವೆ.

ಟೆಸ್ಟ್​ ಕ್ರಿಕೆಟ್​ನಲ್ಲಿ 473 ಬೌಂಡರಿ, 88 ಸಿಕ್ಸರ್​​​​​ ಸಿಡಿಸಿದ ರೋಹಿತ್, 10 ಬಾರಿ ನಾಟೌಟ್​ ಆಗಿ ಉಳಿದುಕೊಂಡಿದ್ದಾರೆ.

ಟೆಸ್ಟ್​​ನಲ್ಲಿ 7538 ಎಸೆತಗಳನ್ನು ಎದುರಿಸಿರುವ ರೋಹಿತ್​, 57.07ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​​​ ಹೊಂದಿದ್ದಾರೆ.

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ