ಸಿಕ್ಸರ್ ಸಿಡಿಸುವಲ್ಲೂ ವಿಶ್ವದಾಖಲೆ ನಿರ್ಮಿಸಿದ ಆರ್‌ಸಿಬಿ!
By Jayaraj
May 19, 2024
Hindustan Times
Kannada
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಇತಿಹಾಸ ನಿರ್ಮಿಸಿದೆ.
ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಬ್ಯಾಟರ್‌ಗಳು ಬರೋಬ್ಬರಿ 16 ಸಿಕ್ಸರ್ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ರೆಕಾರ್ಡ್ ಆರ್‌ಸಿಬಿ ಹೆಸರಿಗಾಯ್ತು.
ಮಾತ್ರವಲ್ಲದೆ, ಟಿ20 ಟೂರ್ನಿಯೊಂದರಲ್ಲಿ 150 ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು.
ಆರ್‌ಸಿಬಿ ತಂಡವು ಐಪಿಎಲ್ 2024ರಲ್ಲಿ ಇಲ್ಲಿಯವರೆಗೆ ಆಡಿದ 14 ಪಂದ್ಯಗಳಲ್ಲಿ 157 ಸಿಕ್ಸರ್ ಸಿಡಿಸಿದೆ.
ಆ ಮೂಲಕ ಈ ವರ್ಷ ಸನ್‌ರೈಸರ್ಸ್ ಹೈದರಾಬಾದ್‌ನ ಸಿಡಿಸಿದ 146 ಸಿಕ್ಸರ್ ದಾಖಲೆ ಬ್ರೇಕ್ ಆಯ್ತು.
ಟಿ20 ಪಂದ್ಯಾವಳಿಯಲ್ಲಿ ಈ ವರ್ಷಕ್ಕೂ ಹಿಂದೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಚೆನ್ನೈ ಹೆಸರಿನಲ್ಲಿತ್ತು.
2018ರ ಐಪಿಎಲ್ ಆವೃತ್ತಿಯಲ್ಲಿ ಸಿಎಸ್‌ಕೆ 145 ಸಿಕ್ಸರ್ ಗಳಿಸಿತ್ತು.
ಹೆಚ್ಚು ಸಾಕ್ಷರತೆ ಇರುವ ಭಾರತದ ಟಾಪ್ 10 ರಾಜ್ಯಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ