ನ್ಯೂಲ್ಯಾಂಡ್ಸ್‌ನಲ್ಲಿ ಶನಿವಾರ (ಜನವರಿ 4) ನಡೆದ ಪಾಕಿಸ್ತಾನ ವಿರುದ್ಧ 2ನೇ ಟೆಸ್ಟ್ನಲ್ಲಿ ಸೌತ್ ಆಫ್ರಿಕಾದ ರಿಯಾನ್ ರಿಕೆಲ್ಟನ್ ದ್ವಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ.
266 ಎಸೆತಗಳಲ್ಲಿ ದ್ವಿಶತಕ ಪೂರೈಸಿದ ಆರಂಭಿಕ ಬ್ಯಾಟ್ಸ್‌ಮನ್, 2008ರ ನಂತರ ವೇಗವಾಗಿ ಡಬಲ್ ಸೆಂಚುರಿ ಸಿಡಿಸಿದ ಆಫ್ರಿಕಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಗ್ರೇಮ್ ಸ್ಮಿತ್ ಅವರು ಬಾಂಗ್ಲಾದೇಶ ವಿರುದ್ಧ 238 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದರು. ಇದೀಗ 16 ವರ್ಷಗಳ ನಂತರ ಆಫ್ರಿಕಾ ಬ್ಯಾಟರ್ ವೇಗದ 200 ರನ್ ಸಿಡಿಸಿದ್ದಾರೆ.
ರಿಯಾನ್ ರಿಕೆಲ್ಟನ್ ಮತ್ತೊಂದು ದಾಖಲೆಯನ್ನೂ ಬರೆದಿದ್ದಾರೆ. 2016ರ ನಂತರ ಸೌತ್ ಆಫ್ರಿಕಾ ನೆಲದಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.
2016ರಲ್ಲಿ ಹಾಶೀಮ್ ಆಮ್ಲಾ ಅವರು ತಮ್ಮ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಇದು 2025ರ ಮೊದಲ ದ್ವಿಶತಕವೂ ಹೌದು.
ಪಂದ್ಯದಲ್ಲಿ ನಾಯಕ ಟೆಂಬಾ ಬವುಮಾ ಜೊತೆಗೆ 4ನೇ ವಿಕೆಟ್‌ಗೆ 235 ರನ್‌ಗಳ ಬೃಹತ್ ಜೊತೆಯಾಟ ಕಟ್ಟಿದ ರಿಯಾನ್, ತಂಡದ ಮೊತ್ತ 600ರ ಗಡಿ ದಾಟಲು ನೆರವಾದರು.
2022ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ರಿಕೆಲ್ಟನ್, ಕಳೆದ ಡಿಸೆಂಬರ್ನಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಚೊಚ್ಚಲ ಶತಕ ಬಾರಿಸಿದ್ದರು.
ಈ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕಂಗನಾ ಅಭಿನಯದ ಸಿನಿಮಾ ಎಮರ್ಜೆನ್ಸಿ