ಗಂಭೀರ್ ದಾಖಲೆ ಮೇಲೆ ಕಣ್ಣಿಟ್ಟ ಸಂಜು ಸ್ಯಾಮ್ಸನ್

By Prasanna Kumar P N
Jan 27, 2025

Hindustan Times
Kannada

ಚೆನ್ನೈನಲ್ಲಿ ನಡೆದ 2ನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ವಿಕೆಟ್​ಗಳ ಗೆಲುವು ಸಾಧಿಸಿದ್ದ ಭಾರತ ತಂಡ, ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ.

ಈ ಗೆಲುವಿನೊಂದಿಗೆ ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಹ್ಯಾಟ್ರಿಕ್ ಗೆಲುವಿನ ಜೊತೆಗೆ ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಜನವರಿ 28ರಂದು ಮೂರನೇ ಟಿ20ಐ ಪಂದ್ಯವು ರಾಜ್​ಕೋಟ್​ನ ನಿರಂಜನ್ ಶಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಸಂಜು ಸ್ಯಾಮ್ಸನ್ ದಾಖಲೆಯೊಂದನ್ನು ನಿರ್ಮಿಸಲು ಸಜ್ಜಾಗಿದ್ದಾರೆ.

3ನೇ ಟಿ20ಐ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ದೊಡ್ಡ ಸಾಧನೆಯೊಂದನ್ನು ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

2015ರಲ್ಲಿ ಅಂತಾರಾಷ್ಟ್ರೀಯ ಟಿ20ಐ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಸಂಜು ಈವರೆಗೂ ಆಡಿರುವ 39 ಟಿ20ಐ ಪಂದ್ಯಗಳಲ್ಲಿ ಆಡಿದ್ದು, 841 ರನ್ ಗಳಿಸಿದ್ದಾರೆ.

ಮುಂಬರುವ ಪಂದ್ಯಗಳಲ್ಲಿ 92 ರನ್ ಗಳಿಸಿದರೆ ಭಾರತ ತಂಡದ ಪರ ಅತ್ಯಧಿಕ ರನ್ ಗಳಿಸಿದ 12ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಆ ಮೂಲಕ ಗೌತಮ್ ಗಂಭೀರ್ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಗಂಭೀರ್ 37 ಪಂದ್ಯಗಳಲ್ಲಿ 932 ರನ್​ ಗಳಿಸಿದ್ದಾರೆ. ಇದೀಗ ಈ ದಾಖಲೆ ಮೇಲೆ ಸಂಜು ಕಣ್ಣಿಟ್ಟಿದ್ದಾರೆ.

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು