ಏಕದಿನ ಕ್ರಿಕೆಟ್​ನಲ್ಲಿ 20 ವರ್ಷ; ಜಿಂಬಾಬ್ವೆ ಆಟಗಾರ ವಿಶ್ವದಾಖಲೆ

By Prasanna Kumar P N
Feb 28, 2025

Hindustan Times
Kannada

ಜಿಂಬಾಬ್ವೆ ತಂಡದ ಹಿರಿಯ ಆಟಗಾರ ಸೀನ್ ವಿಲಿಯಮ್ಸ್ ವಿಶೇಷ ದಾಖಲೆಯೊಂದನ್ನು ನಿರ್ಮಿಸಿ ಸಚಿನ್ ತೆಂಡೂಲ್ಕರ್, ಸನತ್ ಜಯಸೂರ್ಯ ಅವರಂತಹ ದಿಗ್ಗಜರ ಪಟ್ಟಿ ಸೇರಿದ್ದಾರೆ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ 20 ವರ್ಷ ಪೂರೈಸುವ ಮೂಲಕ ಈ ಮೈಲಿಗಲ್ಲು ತಲುಪಿದ್ದಾರೆ. ಈ ದಾಖಲೆ ಬರೆದ ಜಿಂಬಾಬ್ವೆ ತಂಡದ ಮೊದಲ ಆಟಗಾರ, ವಿಶ್ವದ ನಾಲ್ಕನೇ ಆಟಗಾರ.

ಏಕದಿನ ಕ್ರಿಕೆಟ್​ನಲ್ಲಿ ಸುದೀರ್ಘ ವೃತ್ತಿಜೀವನ ಹೊಂದಿರುವ ಆಟಗಾರ ಎಂದರೆ ಸಚಿನ್ ತೆಂಡೂಲ್ಕರ್​. ಅವರು 22 ವರ್ಷ 91 ದಿನಗಳ ಕಾಲ ಒಡಿಐ ಕ್ರಿಕೆಟ್​ನಲ್ಲಿ ಆಡಿದ್ದು, ವಿಶ್ವದಾಖಲೆ ನಿರ್ಮಿಸಿದ್ದಾರೆ.

ಜಿಂಬಾಬ್ವೆ ತಂಡದ ಹಿರಿಯ ಆಟಗಾರ ಸೀನ್ ವಿಲಿಯಮ್ಸ್ ವಿಶೇಷ ದಾಖಲೆಯೊಂದನ್ನು ನಿರ್ಮಿಸಿ ಸಚಿನ್ ತೆಂಡೂಲ್ಕರ್, ಸನತ್ ಜಯಸೂರ್ಯ ಅವರಂತಹ ದಿಗ್ಗಜರ ಪಟ್ಟಿ ಸೇರಿದ್ದಾರೆ.

ಸೀನ್ ವಿಲಿಯಮ್ಸ್​​ಗೂ ಮುನ್ನ ಸಚಿನ್, ಸನತ್ ಜಯಸೂರ್ಯ, ಜಾವೇದ್ ಮಿಯಾಂದಾದ್ ಅವರು ಏಕದಿನ ಕ್ರಿಕೆಟ್​ನಲ್ಲಿ 20 ವರ್ಷ ಪೂರೈಸಿದ್ದರು. ಇದೀಗ ಈ ಪಟ್ಟಿಗೆ ವಿಲಿಯಮ್ಸ್ ಸೇರ್ಪಡೆಗೊಂಡಿದ್ದಾರೆ.

ಸೀನ್ ವಿಲಿಯಮ್ಸ್ ಇತ್ತೀಚೆಗೆ ಯಾವುದೇ ಏಕದಿನ ಕ್ರಿಕೆಟ್ ಆಡಿಲ್ಲ. 2024ರ ಡಿಸೆಂಬರ್​ 21ರಂದು ಅಫ್ಘಾನಿಸ್ತಾನ ವಿರುದ್ಧ ಆಡಿದ್ದೇ ಅವರ ಕೊನೆಯ ಏಕದಿನ ಪಂದ್ಯವಾಗಿದೆ.

ಆದರೆ ಇನ್ನೂ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಪಡೆಯದ ಸೀನ್ ವಿಲಿಯಮ್ಸ್ ಅವರು ಫೆ 25ರಂದು ಈ ಅಪರೂಪದ ಹೆಗ್ಗಳಿಕೆಗೆ ಪಾತ್ರರಾದರು. ಇತ್ತೀಚಿನ ಸರಣಿಗೆ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.

ESPN Cricinfo

ತಮ್ಮ 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ವಿಲಿಯಮ್ಸ್ ಆಡಿರೋದು ಕೇವಲ 165 ಪಂದ್ಯಗಳಲ್ಲಿ ಮಾತ್ರ. 37.51ರ ಬ್ಯಾಟಿಂಗ್ ಸರಾಸರಿಯಲ್ಲಿ 5140 ರನ್ ಗಳಿಸಿದ್ದಾರೆ.

ಜಿಂಬಾಬ್ವೆ ತಂಡದ ಹಿರಿಯ ಆಟಗಾರ ಸೀನ್ ವಿಲಿಯಮ್ಸ್ ವಿಶೇಷ ದಾಖಲೆಯೊಂದನ್ನು ನಿರ್ಮಿಸಿ ಸಚಿನ್ ತೆಂಡೂಲ್ಕರ್, ಸನತ್ ಜಯಸೂರ್ಯ ಅವರಂತಹ ದಿಗ್ಗಜರ ಪಟ್ಟಿ ಸೇರಿದ್ದಾರೆ.

ವಿಲಿಯಮ್ಸ್ ತಮ್ಮ ವೃತ್ತಿಜೀವನದಲ್ಲಿ 8 ಶತಕ, 36 ಅರ್ಧಶತಕ ಸಿಡಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 174 ರನ್. 462 ಬೌಂಡರಿ, 63 ಸಿಕ್ಸರ್​ ಸಿಡಿಸಿದ್ದಾರೆ. 59 ಕ್ಯಾಚ್ ಪಡೆದಿದ್ದಾರೆ.

ಬ್ಯಾಟಿಂಗ್​ ಜೊತೆಗೆ ಬೌಲಿಂಗ್​ನಲ್ಲೂ ಅವರು ಮಿಂಚಿದ್ದಾರೆ. 131 ಇನ್ನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದು 85 ವಿಕೆಟ್ ಕಿತ್ತಿದ್ದಾರೆ. 43ಕ್ಕೆ 4 ವಿಕೆಟ್ ಪಡೆದಿರುವುದು ಅವರ ಬೆಸ್ಟ್ ಬೌಲಿಂಗ್.

ರಂಬುಟಾನ್ ಹಣ್ಣಿನ ಆರೋಗ್ಯ ಪ್ರಯೋಜನಗಳಿವು