ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಶಾನ್ ಮಸೂದ್, ಪಾಕಿಸ್ತಾನದ ಸಾರ್ವಕಾಲಿಕ ದಾಖಲೆ ಮುರಿದಿದ್ದಾರೆ.
ಫಾಲೋ-ಆನ್ ಎದುರಿಸಿದ ಪಾಕ್ ಪರ ಇನ್ನಿಂಗ್ಸ್ ಆರಂಭಿಸಿದ ಮಸೂದ್, 145 ರನ್ ಗಳಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ ಮೊದಲ ಪಾಕಿಸ್ತಾನ ನಾಯಕರಾದರು.
ಮಸೂದ್ ಪಾಕಿಸ್ತಾನದ ಮತ್ತೊಂದು ಸಾರ್ವಕಾಲಿಕ ದಾಖಲೆ ಮುರಿದಿದ್ದಾರೆ. ಅವರು ಗಳಿಸಿದ 145 ರನ್, ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪಾಕಿಸ್ತಾನ ಕ್ರಿಕೆಟಿಗನೊಬ್ಬನ ಅತ್ಯಧಿಕ ಸ್ಕೋರ್ ಆಗಿದೆ.
1998ರಲ್ಲಿ ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಹರಿಣಗಳ ವಿರುದ್ಧ ಅಜರ್ ಮಹಮೂದ್ 136 ರನ್ ಗಳಿಸಿದ್ದರು. ಅದು ಈವರೆಗಿನ ದಾಖಲೆಯಾಗಿತ್ತು.
ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಐತಿಹಾಸಿಕ ದಾಖಲೆ ಮುರಿಯಲು ಮಸೂದ್ ಅವರಿಂದ ಸಾಧ್ಯವಾಗಲಿಲ್ಲ.
ಸದ್ಯ ಭಾರತದ ಮಾಜಿ ಬ್ಯಾಟರ್ ಸಚಿನ್, ದಕ್ಷಿಣ ಆಫ್ರಿಕಾದಲ್ಲಿ ಅತ್ಯಧಿಕ ಸ್ಕೋರ್ (169) ಗಳಿಸಿರುವ ಏಷ್ಯನ್ ನಾಯಕ ಎಂಬ ದಾಖಲೆ ಹೊಂದಿದ್ದಾರೆ.
ಮಸೂದ್ ಈ ದಾಖಲೆ ಮುರಿಯುವುದರಿಂದ ಸ್ವಲ್ಪವೇ ಅಂತರದಲ್ಲಿ ಹಿಂದುಳಿದರು.
ಮಸೂದ್ ಶತಕದ ಹೊರತಾಗಿಯೂ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಸೋಲನುಭವಿಸಿತು. ದಕ್ಷಿಣ ಆಫ್ರಿಕಾ ಸರಣಿ ಗೆದ್ದಿತು.
2-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ತಂಡ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಟ್ಟಿಗೊಳಿಸಿತು.
All Photo: AP
ಚಾಂಪಿಯನ್ಸ್ ಟ್ರೋಫಿ: ಕರುಣ್ ನಾಯರ್ ಕಡೆಗಣನೆಗೆ ಕಾರಣ ತಿಳಿಸಿದ ಅಗರ್ಕರ್