ಸ್ಮೃತಿ ಮಂಧಾನ ವೇಗದ ಶತಕ; ಹಲವು ದಾಖಲೆ

By Jayaraj
Jan 15, 2025

Hindustan Times
Kannada

2024ರ ಆರಂಭದಿಂದಲೂ ಪ್ರಚಂಡ ಫಾರ್ಮ್‌ನಲ್ಲಿರುವ ಸ್ಮೃತಿ ಮಂಧಾನ, ಹೊಸ ವರ್ಷದಲ್ಲೂ ಭರ್ಜರಿ ಬ್ಯಾಟಿಂಗ್‌ ನಡೆಸುತ್ತಿದ್ದಾರೆ.

ಐರ್ಲೆಂಡ್‌ ವಿರುದ್ಧದ‌ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ವೇಗದ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.

ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೇವಲ 70 ಎಸೆತಗಳಲ್ಲಿ ಸೆಂಚುರಿ ಬಾರಿಸಿದರು. ಕೊನೆಗೆ 135 ರನ್‌ ಗಳಿಸಿ ಔಟಾದರು.

ವನಿತೆಯರ ಕ್ರಿಕೆಟ್‌ನಲ್ಲಿ ಭಾರತದ ಪರ ಇದು ವೇಗದ ಶತಕವಾಗಿದೆ. ಈ ಹಿಂದೆ ಹರ್ಮನ್‌ಪ್ರೀತ್‌ ಕೌರ್‌ 87 ಎಸೆತಗಳಲ್ಲಿ ವೇಗದ ಶತಕ ಸಿಡಿಸಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಮಂಧನಾ ಅವರ 10ನೇ ಶತಕವಾಗಿದೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಮಂಧನಾ ಜಂಟಿಯಾಗಿ ಮೂರನೇ ಸ್ಥಾನ ಪಡೆದಿದ್ದಾರೆ.

ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಮಂಧಾನ ಹಾಗೂ ಪ್ರತಿಕಾ ರಾವಲ್‌ ಮೊದಲ ವಿಕೆಟ್‌ಗೆ 233 ರನ್‌ ಕಲೆ ಹಾಕಿದರು.

2024ರಿಂದ ಮಂಧಾನ ಆಡಿರುವ 16 ಏಕದಿನ ಇನ್ನಿಂಗ್ಸ್‌ಗಳಲ್ಲಿ 62.25ರ ಸರಾಸರಿಯಲ್ಲಿ ಬರೋಬ್ಬರಿ 996 ರನ್‌ ಗಳಿಸಿದ್ದಾರೆ. ಇದರಲ್ಲಿ 5 ಶತಕ ಸೇರಿದೆ.

Photo: BCCI X

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು