ಸ್ಮೃತಿ ಮಂಧಾನಗೆ ಐಸಿಸಿ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿ
By Jayaraj
Jan 27, 2025
Hindustan Times
Kannada
2024ರ ಕ್ಯಾಲೆಂಡರ್ ವರ್ಷದಲ್ಲಿ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಭಾರತ ವನಿತೆಯರ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಅಮೋಘ ಪ್ರದರ್ಶನ ನೀಡಿದರು.
ಅದರಲ್ಲೂ ಏಕದಿನ ಸ್ವರೂಪದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಹೀಗಾಗಿ ಸ್ಟೈಲಿಶ್ ಆಟಗಾರ್ತಿ ಐಸಿಸಿ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಐಸಿಸಿ ಸೋಮವಾರ (ಜ.27) ಈ ಪ್ರಶಸ್ತಿಯನ್ನು ಪ್ರಕಟಿಸಿದೆ.
ಸ್ಮೃತಿ ಮಂಧಾನ ವರ್ಷದ ಏಕದಿನ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗುತ್ತಿರುವುದು ಇದು ಎರಡನೇ ಬಾರಿ.
ಶ್ರೀಲಂಕಾದ ಚಮರಿ ಅಥಪತ್ತು, ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ ಅವರನ್ನು ಸೋಲಿಸಿ ಸ್ಮೃತಿ ಈ ಪ್ರಶಸ್ತಿ ಗೆದ್ದಿದ್ದಾರೆ.
ಎಡಗೈ ಬ್ಯಾಟರ್ 2024ರಲ್ಲಿ ಆಡಿದ 13 ಇನ್ನಿಂಗ್ಸ್‌ಗಳಲ್ಲಿ 747 ರನ್ ಗಳಿಸಿದ್ದಾರೆ. ಇದು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅವರು ಗಳಿಸಿದ ಅತಿ ಹೆಚ್ಚು ರನ್ ಆಗಿದೆ.
ಮಂಧನಾ 57.86ರ ಸರಾಸರಿಯಲ್ಲಿ ರನ್ ದಾಖಲಿಸಿದ್ದಾರೆ. ಅವರು 95.15ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.
ಸ್ಮೃತಿ 2024ರಲ್ಲಿ ಏಕದಿನ ಪಂದ್ಯಗಳಲ್ಲಿ ನಾಲ್ಕು ಶತಕಗಳನ್ನು ಬಾರಿಸಿದರು. ಮಹಿಳಾ ಕ್ರಿಕೆಟ್‌ನಲ್ಲಿ ಇದು ಹೊಸ ದಾಖಲೆಯಾಗಿದೆ.
ALL Photo: PTI
ಗುಲಾಬಿಯಂತೆ ಅರಳಿದ ಸಪ್ತಮಿ ಗೌಡ; ಸಿಂಪಲ್ ಕುರ್ತಾದಲ್ಲೂ ಸಖತ್ ಕ್ಯೂಟ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ