ಸೂರ್ಯಕುಮಾರ್ ಯಾದವ್ ಆಹಾರಕ್ರಮ ನಿರ್ಧರಿಸುವವರು ಇವರೇ
By Jayaraj
Jan 28, 2025
Hindustan Times
Kannada
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಫಿಟ್ ಕ್ರಿಕೆಟಿಗರಲ್ಲಿ ಒಬ್ಬರು. ಇದಕ್ಕಾಗಿ ನಿತ್ಯ ವರ್ಕೌಟ್ ಜೊತೆಗೆ ಸೂಕ್ತ ಆಹಾರಕ್ರಮ ಪಾಲಿಸುತ್ತಾರೆ.
ಸೂರ್ಯಕುಮಾರ್ ಯಾದವ್ ನಿತ್ಯದ ಆಹಾರದಲ್ಲಿ ಏನಿರಬೇಕು ಹಾಗೂ ಏನು ಇರಬಾರದು ಎಂಬುದರ ಬಗ್ಗೆ ಖ್ಯಾತ ಡಯೆಟೀಶನ್ ಶ್ವೇತಾ ಭಾಟಿಯಾ ಕಾಳಜಿ ವಹಿಸುತ್ತಾರೆ.
ಶ್ವೇತಾ ಭಾಟಿಯಾ ಅವರು ಸ್ಕೈ ಫಿಟ್ನೆಸ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಶ್ವೇತಾ ಸೂರ್ಯ ಅವರ ಆಹಾರದಲ್ಲಿ ಮಾಂಸಾಹಾರವನ್ನು ಕೂಡಾ ಸೇರಿಸಿದ್ದಾರೆ.
ಸೂರ್ಯಕುಮಾರ್ ಮೊಟ್ಟೆ, ಮಾಂಸ ಮತ್ತು ಮೀನುಗಳನ್ನು ಸೇವಿಸುತ್ತಾರೆ. ಹಾಲಿನ ಉತ್ಪನ್ನಗಳನ್ನು ಕೂಡಾ ತಿನ್ನುತ್ತಾರೆ.
ಶ್ವೇತಾ ಪ್ರಕಾರ, ಸೂರ್ಯ ತಮ್ಮ ಫಿಟ್ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆಹಾರಕ್ರಮದ ಕುರಿತು ನಿರ್ಲಕ್ಷ್ಯ ವಹಿಸುವುದಿಲ್ಲ.
ತೂಕ ಹೆಚ್ಚಳ ತಪ್ಪಿಸಲು, ಸೂರ್ಯ ಸಕ್ಕರೆ ಹಾಕಿದ ಚಹಾ ಅಥವಾ ಕಾಫಿ ಕುಡಿಯುವುದಿಲ್ಲ. ಅಲ್ಲದೆ ಸಿಹಿತಿಂಡಿ ಕೂಡಾ ತಿನ್ನುವುದಿಲ್ಲ.
ಫಿಟ್ನೆಸ್ ಕಾಪಾಡಿಕೊಳ್ಳಲು ಸೂರ್ಯ ತಮ್ಮ ದೈನಂದಿನ ಆಹಾರದಲ್ಲಿ ಚಪಾತಿ ಮತ್ತು ಅನ್ನದ ಸೇವನೆ ಕಡಿಮೆ ಮಾಡುತ್ತಾರೆ.
ರಾಗಿ, ಜೋಳದ ರೊಟ್ಟಿಯನ್ನು ದಾಲ್, ಪನೀರ್, ಹಸಿರು ತರಕಾರಿಗಳೊಂದಿಗೆ ತಿನ್ನಲು ಸೂರ್ಯ ಇಷ್ಟಪಡುತ್ತಾರೆ.
ಡಯೆಟೀಶನ್ ಪ್ರಕಾರ, ಸೂರ್ಯ ವ್ಯಾಯಾಮದ ಜೊತೆಗೆ ಫುಟ್ಬಾಲ್ ಆಡುತ್ತಾರೆ. ಅಲ್ಲದೆ ಈಜುವುದನ್ನೂ ವ್ಯಾಯಾಮದ ಭಾಗವಾಗಿಸಿದ್ದಾರೆ.
Photos: Instagram
ಕೆಲಸ ಮಾಡುವಾಗ ಉಲ್ಲಾಸ ಹೆಚ್ಚಿಸಲು ಸರಳ ಡೆಸ್ಕ್ ವ್ಯಾಯಾಮ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ