ತಂದೆಗೆ ದುಬಾರಿ ಬೈಕ್ ಗಿಫ್ಟ್‌ ಕೊಟ್ಟ ರಿಂಕು ಸಿಂಗ್ 

By Jayaraj
Jan 21, 2025

Hindustan Times
Kannada

ಭಾರತ ಮತ್ತು ಕೆಕೆಆರ್ ತಂಡದ ಸ್ಟಾರ್ ಆಟಗಾರ ರಿಂಕು ಸಿಂಗ್‌, ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ.

ಬಾಲ್ಯದಿಂದಲೇ ಆರ್ಥಿಕ ಸಮಸ್ಯೆ ಎದುರಿಸಿದ್ದ ಅವರು, ಇಂದು ತಮ್ಮ ಕುಟುಂಬವನ್ನು ಮೇಲೆ ತಂದಿದ್ದಾರೆ. 

ಈಗ ವಿಶ್ವದ ಜನಪ್ರಿಯ ಕ್ರಿಕೆಟರ್‌ ಆಗಿರುವ ರಿಂಕು, ತಮ್ಮ ಹೆತ್ತವರ ಕನಸನ್ನು ಈಡೇರಿಸುತ್ತಿದ್ದಾರೆ. ಅದರ ಭಾಗವಾಗಿ ತಂದೆಗೆ ಬೈಕ್‌ ಗಿಫ್ಟ್‌ ಕೊಟ್ಟಿದ್ದಾರೆ.

ಬರೋಬ್ಬರಿ 3.19 ಲಕ್ಷ ರೂಪಾಯಿ ಮೌಲ್ಯದ ಕವಾಸಕಿ ನಿಂಜಾ ಬೈಕ್ ಅನ್ನು ತಂದೆ ಖಾನ್‌ಚಂದ್ರ ಸಿಂಗ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ವಿಡಿಯೋ ಹಂಚಿಕೊಂಡಿದ್ದಾರೆ.

ರಿಂಕು ಸಿಂಗ್ ಅವರ ತಂದೆ ತಮ್ಮ ಹೊಚ್ಚ ಹೊಸ ಬೈಕ್‌ನಲ್ಲಿ ಕುಳಿತು ಸವಾರಿ ಮಾಡುತ್ತಿರುವುದನ್ನು ಕಾಣಬಹುದು.

Instagram

ರಿಂಕು ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೊವನ್ನು ಮರುಹಂಚಿಕೊಂಡಿದ್ದಾರೆ. ತಂದೆಯನ್ನು "ಹೀರೋ" ಎಂದು ಕರೆದಿದ್ದಾರೆ.

ರಿಂಕ್‌ ಸಿಂಗ್‌ ಮುಂದೆ ಇಂಗ್ಲೆಂಡ್‌ ವಿರುದ್ದದ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡಲಿದ್ದಾರೆ. 

ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು

Flickr