ದ್ರಾವಿಡ್‌ ಸ್ಥಾನ ತುಂಬೋರ್ಯಾರು; ಭಾರತದ ಮುಖ್ಯ ಕೋಚ್ ಆಗಬಲ್ಲ ಐವರು ದಿಗ್ಗಜರು

By Jayaraj
May 16, 2024

Hindustan Times
Kannada

ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಅಂತ್ಯವಾಗುತ್ತಿದೆ. ಈಗ ಬಿಸಿಸಿಐ ಹೊಸ ಕೋಚ್‌ ಹುಡುಕಾಟದಲ್ಲಿದೆ. ದಿ ವಾಲ್‌ ಸ್ಥಾನ ತುಂಬಬಲ್ಲ ಐದು ದಿಗ್ಗಜರ ಹೆಸರು ಹೀಗಿದೆ.

ಸ್ಟೀಫನ್ ಫ್ಲೆಮಿಂಗ್

ನ್ಯೂಜಿಲ್ಯಾಂಡ್‌ ಮಾಜಿ ನಾಯಕ ಹಾಗೂ ಸಿಎಸ್‌ಕೆ ಮುಖ್ಯ ಕೋಚ್ ಫ್ಲೆಮಿಂಗ್‌ ಈ ಪಟ್ಟಿಯಲ್ಲಿದ್ದಾರೆ. ಅವರ ಕೋಚಿಂಗ್‌ನಲ್ಲಿ ಚೆನ್ನೈ ತಂಡ 5 ಐಪಿಎಲ್‌ ಟ್ರೋಫಿ ಗೆದ್ದಿದೆ.

ವಿವಿಎಸ್ ಲಕ್ಷ್ಮಣ್

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ಲಕ್ಷ್ಮಣ್ ಅವರ ಕೋಚಿಂಗ್‌ನಲ್ಲಿ ಭಾರತ ತಂಡವು ಏಷ್ಯನ್ ಗೇಮ್ಸ್ ಮತ್ತು ಹಲವಾರು ದ್ವಿಪಕ್ಷೀಯ ಸರಣಿಗಳಲ್ಲಿ ಯಶಸ್ವಿಯಾಗಿದೆ.

ರಿಕಿ ಪಾಂಟಿಂಗ್

ಆಸೀಸ್‌ ದಿಗ್ಗಜ ಪಾಂಟಿಂಗ್, 2021ರಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಖ್ಯ ತರಬೇತುದಾರರಾಗಿದ್ದಾರೆ. ಅದಕ್ಕೂ ಹಿಂದೆ ಮುಂಬೈ ಇಂಡಿಯನ್ಸ್‌ ಕೋಚ್‌ ಆಗಿದ್ದರು

ಜಸ್ಟಿನ್ ಲ್ಯಾಂಗರ್

ಆಸ್ಟ್ರೇಲಿಯಾ ಮಾಜಿ ಮುಖ್ಯ ಕೋಚ್ ಲ್ಯಾಂಗರ್, ತಮ್ಮ ತಂಡಕ್ಕೆ 2 ಆಶಸ್ ಟ್ರೋಫಿ ಮತ್ತು 2021ರ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವಿನತ್ತ ತರಬೇತಿ ನೀಡಿದ್ದಾರೆ. ಪ್ರಸ್ತುತ ಎಲ್‌ಎಸ್‌ಜಿ ಕೋಚ್ ಆಗಿದ್ದಾರೆ.

ಗೌತಮ್ ಗಂಭೀರ್

ಟೀಮ್ ಇಂಡಿಯಾದ ಮುಂದಿನ ಕೋಚ್ ಸ್ಥಾನಕ್ಕೆ ಗಂಭೀರ್ ಪ್ರಮುಖ ಸ್ಪರ್ಧಿ. ಪ್ರಸ್ತುತ ಕೆಕೆಆರ್‌ ಮೆಂಟರ್‌ ಆಗಿರುವ ಗೌತಿ ಮಾರ್ಗದರ್ಶನದಲ್ಲಿ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆದಿದೆ.

ಬಿಸಿಲಿಗೆ ಸೊರಗಿದ ಚರ್ಮದ ಕಾಂತಿ ಒಂದೇ ದಿನದಲ್ಲಿ ಅರಳಬೇಕು ಅಂದ್ರೆ ಈ ಫೇಸ್‌ಪ್ಯಾಕ್‌ ಬಳಸಿ